
ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯ. ಚೆನ್ನ್ಮೆನ ಚಿದಂಬರ ಸ್ಟೇಡಿಯಂನಲ್ಲಿ ನಡೆಯಲಿದೆ. 5 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿತ್ತು. ಬೌಲಿಂಗ್, ಬ್ಯಾಟಿಂಗ್ ಎರಡು ವಿಭಾಗದಲ್ಲೂ ಭಾರತ ಉತ್ತಮ ಪ್ರದರ್ಶನ ನೀಡಿತ್ತು. ಈ ಪಂದ್ಯದಲ್ಲೂ ಮತ್ತೆ ಅದೇ ಪ್ರದರ್ಶನ ಮುಂದುವರೆಸುವ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ ಇದೆ. ಇಂಗ್ಲೆಂಡ್ ತಂಡದಲ್ಲೂ ಸಹ ಪಂದ್ಯದ ದಿಕ್ಕನೇ ಬದಲಾಯಿಸುವ ಆಟಗಾರರಿದ್ದಾರೆ. ಆದರೆ ಚೆನ್ನ್ಮೆನ ಪಿಚ್ ಸ್ಪಿನ್ನರ್ಗಳಿಗೆ ಅನುಕೂಲವಾಗುವುದ್ದರಿಂದ ಬ್ಯಾಟ್ಸ್ಮನ್ಗಳು ಯಾವ ರೀತಿ ರನ್ ಗಳಿಸುತ್ತಾರೆ ಎಂಬುದು ನೋಡಬೇಕಾಗಿದೆ.ಭಾರತ ಪರ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಅಲೌಂಡರ್ ಅಕ್ಷರ್ ಪಟೇಲ್ ಉತ್ತಮ ಲಯದಲ್ಲಿದ್ದು ಈ ಬಾರಿ ಎದುರಾಳಿದ ಬ್ಯಾಟ್ಸ್ಮನ್ಗಳಿಗೆ ತಲೆ ನೋವು ಆಗಲಿದ್ದಾರೆ.
