
ಇಂದಿನಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದ್ದು , ಆರಂಭಿಕ ಪಂದ್ಯ ಕರಾಚಿಯಲ್ಲಿ ನ್ಯೂಜಿಲೆಂಡ್ ಹಾಗೂ ಹಾಲಿ ಚಾಂಪಿಯನ್ ಪಾಕಿಸ್ತಾನ ಸೆಣಸಾಡಲಿವೆ. ಟೂರ್ನಿ ಪಾಕಿಸ್ತಾನದಲ್ಲೇ ನಡೆಯುತ್ತಿರುವುದ್ದರಿಂದ ಸಹಜವಾಗಿ ಪ್ರಶಸ್ತಿ ಗೆಲ್ಲುವ ಫೇವರೆಟ್ ತಂಡಗಳಲ್ಲಿ ಪಾಕಿಸ್ತಾನವು ಒಂದಾಗಿದೆ. ಪಾಕ್ ತಂಡದಲ್ಲಿ ಬಾಬರ್ ಅಜಂ,ಫಖರ್ ಜಮಾನ್,ಆಘಾ ಸಲ್ಮಾನ್ರಂತಹ ಬ್ಯಾಟ್ಸ್ಮನ್ಗಳಿದ್ದಾರೆ. ಬೌಲಿಂಗ್ನಲ್ಲಿ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್,ನಸೀಂ ಶಾ, ಅಬ್ರಾರ್ ಅಹ್ಮದ್ ಇದ್ದಾರೆ. ಮತ್ತೊಂದು ಕಡೆ ಕೀವಿಸ್ ಕೂಡ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇತ್ತೀಚೆಗೆ ನಡೆದ ಪಾಕಿಸ್ತಾನ ಸರಣಿಯಲ್ಲಿ ಗೆದ್ದು ಬೀಗಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್, ನ್ಯೂಜಿಲೆಂಡ್ ತಂಡದಲ್ಲಿ ಡೆವೋನ್ ಕಾನ್ ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಲೇಥಮ್ ತಂಡದ ಪ್ರಮುಖ ಬ್ಯಾಟರ್ಗಳಾಗಿದ್ದಾರೆ. ಅಲ್ರೌಂಡರ್ ಮೈಕಲ್ ಬ್ರೇಸ್ವೆಲ್, ಮಿಚೆಲ್ ಸ್ತಾಂಟ್ನರ್ ಯಾವುದೇ ಕ್ಷಣದಲ್ಲಿ ಮಿಂಚಬಲ್ಲ ಆಟಗಾರರಾಗಿದ್ದಾರೆ. ಇವರ ಜೊತೆಗೆ ಬೌಲರ್ಗಳಾದ ಮ್ಯಾಟ್ ಹೆನ್ರಿ, ಜೇಮಿಸನ್, ವಿಲ್ ಒರೌರ್ಕಿ ತಂಡದ ಮೈನ್ ಬೌಲರ್ಗಳಾಗಿದ್ದಾರೆ…

ಪಿಚ್ ರಿಪೋರ್ಟ್
ಕರಾಚಿ ಸ್ಟೇಡಿಯಂ ಬ್ಯಾಟಿಂಗ್ಗೆ ಸಹಾಯಕವಾಗಲಿದ್ದು ದೊಡ್ಡ ಮೊತ್ತ ಕಲೆ ಹಾಕುವ ಸಾಧ್ಯತೆ ಹೆಚ್ಚಿದೆ. ಪಂದ್ಯದ ಆರಂಭದಲ್ಲಿ ಬೌಲರ್ಗಳಿಗೆ ಅನುಕೂಲವಾದರೂ ಮುಂದೆ ಸಾಗಿದಂತೆ ಬ್ಯಾಟಿಂಗ್ಗೆ ಸಹಾಯಕವಾಗಲಿದೆ. ಟಾಸ್ ಪ್ರಮುಖ ಪಾತ್ರ ವಹಿಸಲಿದ್ದು ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಟಿಂಗ್ ಆಯ್ಕೆ ಮಾಡಿಕೊಳ್ಳುವ ಅವಕಾಶ ಹೆಚ್ಚಿದೆ..
ಪಾಕಿಸ್ತಾನ ತಂಡ
ಮೊಹಮ್ಮದ್ ರಿಜ್ವಾನ್ ಸಲ್ಮಾನ್ ಅಲಿ ಅಘಾ ,ಬಾಬರ್ ಅಜಮ್, ಫಖರ್ ಜಮಾನ್, ಸೌದ್ ಶಕೀಲ್, ಕಮ್ರಾನ್ ಗುಲಾಮ್, ಖುಶ್ದಿಲ್ ಶಾ, ತಯ್ಯಬ್ ತಾಹಿರ್, ಉಸ್ಮಾನ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ
ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ ,ವಿಲ್ ಯಂಗ್, ಡೆವೊನ್ ಕಾನ್ವೆ, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಮಾರ್ಕ್ ಚಾಪ್ಮನ್, ಮೈಕೆಲ್ ಬ್ರೇಸ್ವೆಲ್, ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ನಾಥನ್ ಸ್ಮಿತ್, ಬೆನ್ ಸಿಯರ್ಸ್, ವಿಲ್ ಓ ರಾರ್ಕಿ, ಲಾಕಿ ಫರ್ಗುಸನ್
ಹೆಡ್ ಟು ಹೆಡ್
ಪಾಕಿಸ್ತಾನ ನ್ಯೂಜಿಲೆಂಡ್ ತಂಡಗಳು 118 ಬಾರಿ ಮುಖಾಮುಖಿಯಾಗಿದ್ದು ಅದರಲ್ಲಿ ಪಾಕಿಸ್ತಾನ 61 ಹಾಗೂ ನ್ಯೂಜಿಲೆಂಡ್ 53 ಪಂದ್ಯಗಳಲ್ಲಿ ಜಯ ಗಳಿಸಿದೆ.
ಅಭಿಷೇಕ್ ಎಸ್