Ashwaveega News 24×7 ಮಾರ್ಚ್ 21 – 2026 : ಯುದ್ಧ ರಾಜಕೀಯಕ್ಕೆ ಹೊಸ ಟ್ವಿಸ್ಟ್ ಕೊಡಲು Donald Trump ಮುಂದಾಗಿದ್ದಾರೆ . ಇರಾನ್ ಜೊತೆಗಿನ ಉದ್ವಿಗ್ನತೆ ನಡುವೆಯೇ ಅಮೆರಿಕಾ ತೆಗೆದುಕೊಂಡಿರುವ ಹೊಸ ನಿರ್ಧಾರ ಜಾಗತಿಕ ಗಮನ ಸೆಳೆದಿದೆ.
ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದ United States, ಇದೀಗ ಕೆಲವು ಷರತ್ತುಗಳೊಂದಿಗೆ ತಾತ್ಕಾಲಿಕ ಸಡಿಲಿಕೆ ನೀಡಿದೆ. ವಿಶೇಷವಾಗಿ ಸಮುದ್ರದಲ್ಲೇ ಈಗಾಗಲೇ ಸಂಗ್ರಹವಾಗಿರುವ ಇರಾನ್ ತೈಲವನ್ನು ಮಾರಾಟ ಮಾಡಲು 30 ದಿನಗಳ ಕಾಲ ಅವಕಾಶ ನೀಡಲಾಗಿದೆ.
ಆದರೆ ಇದು ಸಂಪೂರ್ಣ ಸಡಿಲಿಕೆ ಅಲ್ಲ. Iran ತನ್ನ ತೈಲ ಕ್ಷೇತ್ರಗಳಿಂದ ಹೊಸದಾಗಿ ತೈಲ ತೆಗೆಯಲು ಅನುಮತಿ ಇಲ್ಲ. ಅಂದರೆ, ಈಗಿರುವ ಸ್ಟಾಕ್ ಮಾತ್ರ ಮಾರಾಟ ಮಾಡಬಹುದು ಎಂಬ ಕಟ್ಟುನಿಟ್ಟಿನ ನಿಯಮ ವಿಧಿಸಲಾಗಿದೆ.
ಈ ನಿರ್ಧಾರವನ್ನು Donald Trump ಮಾನವೀಯ ದೃಷ್ಟಿಕೋನದಿಂದ ತೆಗೆದುಕೊಂಡಿದ್ದಾಗಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ . ಜಾಗತಿಕವಾಗಿ “ನಾವು ನೆರವಾಗುತ್ತಿದ್ದೇವೆ” ಎಂಬ ಸಂದೇಶ ನೀಡಲು ಅಮೆರಿಕಾ ಪ್ರಯತ್ನಿಸುತ್ತಿದೆ.
ಇದಕ್ಕೆ ಕಾರಣ ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆ. ಜಾಗತಿಕ ಹಣಕಾಸು ವ್ಯವಹಾರಗಳಲ್ಲಿ ಡಾಲರ್ ಪ್ರಾಬಲ್ಯ ಹೊಂದಿರುವುದರಿಂದ, ಅಮೆರಿಕಾ ವಿಧಿಸುವ ನಿರ್ಬಂಧಗಳು ವಿಶ್ವದ ಬಹುತೇಕ ದೇಶಗಳು ಮತ್ತು ಕಂಪನಿಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ, ಇರಾನ್ ನೇರವಾಗಿ ತೈಲ ಮಾರಾಟ ಮಾಡಲು ಪ್ರಯತ್ನಿಸಿದರೂ, ಖರೀದಿದಾರರು ಅಮೆರಿಕಾ ನಿರ್ಬಂಧಗಳ ಭೀತಿಯಿಂದ ಹಿಂದೆ ಸರಿಯುತ್ತಾರೆ.
ಹೀಗಾಗಿ, ಅಮೆರಿಕಾ ನೀಡುವ ಇಂತಹ “ಕಂಡೀಷನಲ್ ರಿಲೀಫ್” ಇರಾನ್ಗೆ ಸೀಮಿತ ಮಟ್ಟದ ಉಸಿರು ಕೊಡುವ ಪ್ರಯತ್ನವಾಗಬಹುದು. ಆದರೆ, ಈ ರೀತಿಯ ನಿಯಂತ್ರಿತ ಸಡಿಲಿಕೆಯನ್ನು ಸ್ವೀಕರಿಸುವಲ್ಲಿ ಇರಾನ್ ಎಷ್ಟು ಆಸಕ್ತಿ ತೋರುತ್ತದೆ ಎಂಬುದು ಇನ್ನೂ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ , ಇದು ಸಹಾಯಕ್ಕಿಂತ ಹೆಚ್ಚಾಗಿ ಜಾಗತಿಕ ರಾಜಕೀಯ ಆಟದ ಭಾಗವೇ ಎನ್ನುವ ಮಾತುಗಳು ಕೇಳಿಬರುತ್ತಿವೆ.
