Ashwaveega News 24×7 ಮಾರ್ಚ್ 08 – 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರವಾಗಿರುವ ನಡುವೆಯೇ, Donald Trump ಇರಾನ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಬೇಷರತ್ತಾಗಿ ಶರಣಾಗದಿದ್ದರೆ Iran ವಿರುದ್ಧ ಇನ್ನಷ್ಟು ಭಾರೀ ದಾಳಿ ನಡೆಸಲಾಗುವುದು ಎಂದು ಅವರು ಗುಡುಗಿದ್ದಾರೆ.
ಇರಾನ್ ತಕ್ಷಣವೇ ಶರಣಾಗಬೇಕು. ಶರಣಾಗದೇ ಯಾವುದೇ ಮಾತುಕತೆ ಅಥವಾ ಒಪ್ಪಂದ ನಡೆಯುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಮುಂದಿನ ಪರಿಣಾಮಗಳು ಇನ್ನಷ್ಟು ಘೋರವಾಗಿರಲಿದ್ದು, ಇರಾನ್ನ ಹೊಸ ಸೈನಿಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇದರ ಜೊತೆಗೆ United States ರಕ್ಷಣಾ ಕಾರ್ಯದರ್ಶಿ Pete Hegseth ಕೂಡ ಕಠಿಣ ಸಂದೇಶ ನೀಡಿದ್ದಾರೆ. “ಅಮೆರಿಕನ್ನರನ್ನು ಕೊಂದರೆ ನಾವು ನಿಮ್ಮನ್ನು ಕೊಲ್ಲುತ್ತೇವೆ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಅಮೆರಿಕನ್ನರನ್ನು ಬೆದರಿಸಲು ಪ್ರಯತ್ನಿಸಿದರೂ ಸಹ ಅದನ್ನು ಸಹಿಸುವುದಿಲ್ಲ. ಅಗತ್ಯವಿದ್ದರೆ ಹಿಂಜರಿಕೆಯಿಲ್ಲದೆ ನಿಮ್ಮನ್ನು ಬೇಟೆಯಾಡುತ್ತೇವೆ ಎಂದು ಪೀಟ್ ಹೆಗ್ಸೆ ಮತ್ತೊಮ್ಮೆ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಗಳಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ .
