ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮ ಉಲ್ಲಂಘಿಸಿ ಅನಧಿಕೃತ ಜಾಹೀರಾತು ಫಲಕ ಅಳವಡಿಸಿರುವ ಖಾಸಗಿ ಕಂಪನಿಗೆ ನೋಟಿಸ್ ನೀಡಿದೆ. Sign Post India Pvt Ltd ಕಂಪನಿಯು ನಗರದಲ್ಲಿ 500 ಕ್ಕೂ ಹೆಚ್ಚು ಕಡೆಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿದ್ದು, ಪಾದಚಾರಿ ಸ್ಥಳಗಳು ಸೇರಿದಂತೆ ಪ್ರಮುಖ ಸರ್ಕಲ್ಗಳಲ್ಲಿ ಎಲ್ಇಡಿ ಬೋರ್ಡ್ಗಳನ್ನು ಸ್ಥಾಪಿಸಲಾಗಿದೆ.
ಹೈಕೋರ್ಟ್ ಆದೇಶದಂತೆ ಪಾದಚಾರಿ ಸ್ಥಳಗಳಲ್ಲಿ ಯಾವುದೇ ಜಾಹೀರಾತು ಅಳವಡಿಕೆ ಮಾಡಬಾರದು ಎಂಬ ನಿಯಮವನ್ನು ಉಲ್ಲಂಘಿಸಿರುವ Sign Post ಕಂಪನಿ ವಿರುದ್ಧ ಬಿಬಿಎಂಪಿ 25 ಪುಟಗಳ ನೋಟಿಸ್ ನೀಡಿದೆ.
ಕಂಪನಿಯು ಬಿಬಿಎಂಪಿ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದರೂ, ಅನುಮತಿ ಪಡೆಯದೆ ಅನಧಿಕೃತ ಜಾಹೀರಾತು ಹಾಕಲಾಗಿದೆ. 15 ದಿನಗಳ ಒಳಗಾಗಿ ಎಲ್ಲಾ ಫಲಕಗಳನ್ನು ತೆರವು ಮಾಡದಿದ್ದರೆ, Sign Post ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಲಾಗಿದೆ.
ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿಯಂತೆ, Sign Post India ಕಂಪನಿಯು ಈಗಾಗಲೇ ಬಿಬಿಎಂಪಿಗೆ ₹75 ಕೋಟಿ ಬಾಕಿ ಹಣ ಪಾವತಿಸಬೇಕಾಗಿದೆ.