Ashwaveega News 24×7 ಮಾರ್ಚ್ 25 – 2026 ಗಾಂಧಿನಗರ : 7 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ ಗುಜರಾತ್ ವಿಧಾನಸಭೆಯು ಏಕರೂಪ ನಾಗರಿಕಾ ಸಂಹಿತೆ ಮಸೂದೆಯನ್ನು ಅಂಗೀಕರಿಸಲಾಗಿದೆ.
ಸಮಾನತೆ ಖಚಿತಪಡಿಸುವಲ್ಲಿ ಇದೊಂದು ಅಭೂತಪೂರ್ವ ಸುಧಾರಣೆ ಎಂದು ಅಡಳಿತಾರೂಢ ಬಿಜೆಪಿ ಹೇಳಿದರೆ, ಮಸೂದೆಯನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೇಸ್, ಇದು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದು, ಮುಸ್ಲಿಂ ವಿರೋಧಿ ಮಸೂದೆ ಎಂದು ಆರೋಪಿಸಿದೆ.

ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿ ವರದಿ ನೀಡಿ ವಾರದ ಬಳಿಕ ಮಂಗಳವಾರ (ಮಾ.24) ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಸೂದೆಯನ್ನು ಮಂಡಿಸಿದ್ದರು. ಈ ಮಸೂದೆಯು ರಾಜ್ಯದ ಎಲ್ಲ ದರ್ಮದವರು ಮದುವೆ, ವಿಚ್ಛೇಧನ, ಉತ್ತರಾಧಿಕಾರ ಮತ್ತು ಸಹಜೀವನ ಕುರಿತಂತೆ ಏಕರೂಪದ ಕಾನೂನು ಚೌಕಟ್ಟನ್ನು ನೀಡುತ್ತದೆ.
ಬಹುಮತದ ಮೂಲಕ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಲಾಗಿದೆ. ಇದನ್ನು ವಿರೋಧಿಸಿರುವ ಕಾಂಗ್ರೇಸ್ ಮತ್ತು ಎಎಪಿ ಮಸೂದೆಯನ್ನು ಸದನ ಸಮಿತಿಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದ್ದವು.
