Ashwaveega News 24×7 ಫೆಬ್ರವರಿ 2026 – ನವದೆಹಲಿ : : 2026ರ ಕೇಂದ್ರ ಬಜೆಟ್ ಅನ್ನು ಗೇಮ್ ಚೇಂಜರ್ ಬಜೆಟ್ ಎಂದು ಬಿಂಬಿಸಲಾಗುತ್ತಿದ್ದು, ದೇಶದ ಆರ್ಥಿಕ ಸ್ಥಿತಿ, ಜನಸಾಮಾನ್ಯರ ಬದುಕು ಹಾಗೂ ರಾಜ್ಯಗಳ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್ ಮಹತ್ವ ಪಡೆದುಕೊಂಡಿದೆ. ಮಧ್ಯಮ ವರ್ಗದಿಂದ ಹಿಡಿದು ರೈತರು, ಉದ್ಯಮಿಗಳು ಹಾಗೂ ರಾಜ್ಯ ಸರ್ಕಾರಗಳವರೆಗೆ ಎಲ್ಲರಲ್ಲೂ ಭಾರೀ ನಿರೀಕ್ಷೆ ಮೂಡಿದೆ.
2026ರ ಬಜೆಟ್ನಲ್ಲಿ ಜನಸಾಮಾನ್ಯರು ಕೆಳಕಂಡ ಅಂಶಗಳಿಗೆ ಆದ್ಯತೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ:
- ತೆರಿಗೆದಾರರಿಗೆ ಮತ್ತಷ್ಟು ರಿಲೀಫ್
- ಆದಾಯ ತೆರಿಗೆ ಮಿತಿ ವಿಸ್ತರಣೆ
- ರೈತರಿಗೆ ಪಿಎಂ ಕಿಸಾನ್ ನೆರವು ಹೆಚ್ಚಳ
- ಎಂಎಸ್ಎಂಇ ವಲಯಕ್ಕೆ ಉತ್ತೇಜನ
- ಕೃತಕ ಬುದ್ಧಿಮತ್ತೆ (AI) ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ
- ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯಗಳಿಗೆ ಆದ್ಯತೆ
- ರೈಲ್ವೆ ವಲಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು
- ಹೊಸ ರೈಲುಗಳ ಘೋಷಣೆ, ಸೌರಶಕ್ತಿ ಸಬ್ಸಿಡಿ
- ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ
- ಹಣದುಬ್ಬರಕ್ಕೆ ಕಡಿವಾಣ
- ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆ
- ರೂಪಾಯಿ ಮೌಲ್ಯ ವೃದ್ಧಿಗೆ ಕ್ರಮ
- ಚಿನ್ನ–ಬೆಳ್ಳಿ ಬೆಲೆಗಳ ಇಳಿಕೆಗೆ ಕ್ರಮ
ರಾಜ್ಯ ಬಜೆಟ್–2026: ಕೇಂದ್ರದಿಂದ ರಾಜ್ಯಕ್ಕೆ ಏನು?
ಕೇಂದ್ರ ಬಜೆಟ್ನಲ್ಲಿ ರಾಜ್ಯಗಳಿಗೆ ಸಿಗುವ ಅನುದಾನದತ್ತ ಈ ಬಾರಿ ಹೆಚ್ಚಿನ ಗಮನ ಹರಿಸಲಾಗಿದೆ. ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಇರುವುದರಿಂದ, ಬಜೆಟ್ ಚುನಾವಣಾ ತಂತ್ರಗಾರಿಕೆಗೆ ಸೀಮಿತವಾಗುತ್ತದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ದಕ್ಷಿಣ ಭಾರತದ ಆರ್ಥಿಕ ಶಕ್ತಿ ಎನ್ನಲಾಗುವ ಕರ್ನಾಟಕದ ಪಾಲಿಗೆ ಕೇಂದ್ರ ಸರ್ಕಾರದ ನಿಲುವು ಹೇಗಿರಲಿದೆ? ಎಂಬ ಪ್ರಶ್ನೆ ಪ್ರಮುಖವಾಗಿ ಚರ್ಚೆಯಲ್ಲಿದೆ.
ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದರೂ, ಕೇಂದ್ರದಿಂದ ತಕ್ಕ ಮಟ್ಟದ ಪ್ರತಿಫಲ ಸಿಗುತ್ತಿಲ್ಲ ಎಂಬ ಆರೋಪ ರಾಜ್ಯದಲ್ಲಿ ಮುಂದುವರಿದಿದೆ.
ಕರ್ನಾಟಕದ ನಿರೀಕ್ಷೆಗಳೇನು?
2026ರ ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ಸರ್ಕಾರ ಮತ್ತು ಜನತೆಯ ಪ್ರಮುಖ ನಿರೀಕ್ಷೆಗಳು ಹೀಗಿವೆ:
- ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಂತಿಮ ಮಾನ್ಯತೆ
- ಎತ್ತಿನಹೊಳೆ ಯೋಜನೆಗೆ ಕೇಂದ್ರ ಅನುಮತಿ
- ಮಹದಾಯಿ ಯೋಜನೆಗೆ ‘ರಾಷ್ಟ್ರೀಯ ಯೋಜನೆ’ ಸ್ಥಾನಮಾನ
- ಭದ್ರಾ ಮೇಲ್ದಂಡೆ ಯೋಜನೆಗೆ ಬಾಕಿ 5,300 ಕೋಟಿ ಬಿಡುಗಡೆ
- ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ ಕೇಂದ್ರ ನೆರವು
- ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆಗೆ ಹೆಚ್ಚಿನ ಅನುದಾನ
- ಚೆನ್ನೈ–ಬೆಂಗಳೂರು–ಮೈಸೂರು ಹೈಸ್ಪೀಡ್ ರೈಲು ಯೋಜನೆ
- ಹಾಸನಕ್ಕೆ ಐಐಟಿ ಸ್ಥಾಪನೆ
- ಶಿರಾಡಿ ಸುರಂಗ ಯೋಜನೆಗೆ ವೇಗ
- ರಾಯಚೂರಿಗೆ ಏಮ್ಸ್ ಸ್ಥಾಪನೆ
- ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಮರುಜೀವ
- ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ
- ಮೈಸೂರು–ಕುಶಾಲನಗರ ಹೊಸ ರೈಲು ಮಾರ್ಗ ಯೋಜನೆ
ಗೇಮ್ ಚೇಂಜರ್ ಬಜೆಟ್: ಏನೇನು ಆಗಬಹುದು?
ಬಜೆಟ್ ಕುರಿತು ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ಹಲವು ಅಂದಾಜುಗಳು ವ್ಯಕ್ತವಾಗಿವೆ:
ಮಹದಾಯಿ ಯೋಜನೆ ಕುರಿತು ಪ್ರಸ್ತಾಪವೇ ಇಲ್ಲದಿರುವ ಸಾಧ್ಯತೆ
ಚುನಾವಣಾ ರಾಜ್ಯಗಳಿಗೆ ಬಂಪರ್ ಕೊಡುಗೆ ಸಿಗುವ ಸಾಧ್ಯತೆ
ಕರ್ನಾಟಕದ ನಿರೀಕ್ಷೆಗಳಿಗೆ ಕಡಿಮೆ ಆದ್ಯತೆ ಸಿಗುವ ಆತಂಕ
ತೆರಿಗೆ ಹಂಚಿಕೆಯಲ್ಲಿ ಮತ್ತೆ ಅನ್ಯಾಯವಾಗುವ ಸಾಧ್ಯತೆ
ಬೆಂಗಳೂರು ಮೂಲಸೌಕರ್ಯಕ್ಕೆ ನಿರೀಕ್ಷಿತ ಅನುದಾನ ಸಿಗದಿರುವ ಸಾಧ್ಯತೆ
ಕೃಷ್ಣಾ ಮೇಲ್ದಂಡೆ ಯೋಜನೆಗೆ ಮಾನ್ಯತೆ ವಿಳಂಬವಾಗುವ ಆತಂಕ
ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ನಿರಾಸೆ .
