
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇಂದಿನಿಂದ ಲಖನೌದಲ್ಲಿ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಯು.ಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಸೆಣಸಾಡಲಿವೆ. ಸೀಸನ್ 1 ಹಾಗೂ 2ರ ರನ್ನರ್ ಅಪ್ ಡೆಲ್ಲಿ ತಂಡ ಇದಾಗಲೇ ಸೆಮಿಫೈನಲ್ಗೆ ಕ್ವಾಲಿಫೈಯ್ ಆಗಿದೆ. ಇನ್ನೂಳಿದ ಎರಡು ಸ್ಥಾನಕ್ಕೆ 4 ತಂಡಗಳು ಪೈಪೋಟಿ ನಡೆಸಬೇಕಿದೆ. ಸದ್ಯಕ್ಕೆ ಮುಂಬೈ ಎರಡನೇ ಸ್ಥಾನ ಹಾಗೂ ಯು.ಪಿ ವಾರಿಯರ್ಸ್ ಮೂರನೇ ಸ್ಥಾನದಲ್ಲಿದೆ. ಆರ್ಸಿಬಿ,ಗುಜರಾತ್ 4,5ನೇ ಸ್ಥಾನದಲ್ಲಿದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಗುಜರಾತ್ ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಟೂರ್ನಿಯಲ್ಲಿ ಇದುವರೆಗೂ 5 ಪಂದ್ಯಗಳಿಂದ 2ರಲ್ಲಿ ಗೆದ್ದು, 3ರಲ್ಲಿ ಸೋತು ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಪಂದ್ಯಗಳನ್ನು ಗೆದ್ದರೆ ಮಾತ್ರ ಗುಜರಾತ್ಗೆ ಸೆಮಿಫೈನಲ್ ಆಸೆ ಉಳಿದುಕೊಳ್ಳಲಿದೆ.

ಅಭಿಷೇಕ್.ಎಸ್