Ashwaveega News 24×7 ಫೆಬ್ರವರಿ 07 -2026 – ನಿನ್ನೆಯಷ್ಟೇ ವಿಶ್ವಕಪ್ ಫೈನಲ್ನಲ್ಲಿ ಅಬ್ಬರಿಸಿ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಯಂಗ್ ಇಂಡಿಯಾ ಸ್ಟಾರ್ ವೈಭವ್ ಸೂರ್ಯವಂಶಿ ಇದೀಗ ಅಚ್ಚರಿಯ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಸತತ ಆರನೇ ಬಾರಿ ಭಾರತ ವಿಶ್ವಕಪ್ ಎತ್ತುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಇದೀಗ ಅರೆಸ್ಟ್ ಆಗಬೇಕು ಎನ್ನುವ ವಿಚಿತ್ರ ಬೇಡಿಕೆಗೆ ಗುರಿಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. 15 ಸಿಕ್ಸ್, 15 ಫೋರ್ಗಳ ಮೂಲಕ ಹರಾರೆ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ್ದ ವೈಭವ್, ಇಂಗ್ಲೆಂಡ್ ಬೌಲರ್ಗಳನ್ನು ಬೆವರಿಳಿಸಿದ್ದರು. 100 ರನ್ಗಳ ಭರ್ಜರಿ ಜಯದಲ್ಲಿ ಅವರ ಪಾತ್ರ ಚರಿತ್ರಾತ್ಮಕವಾಗಿತ್ತು.
ಆದರೆ ಇಂತಹ ಸೂರ್ಯವಂಶಿ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮಾಡಿದ ತಪ್ಪೇನು ? ವೈಭವ್ ಸೂರ್ಯವಂಶಿ ಅರೆಸ್ಟ್ ಆಗುವಂತಹ ಅಪರಾಧ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗದ್ದಲ ಎಬ್ಬಿಸಿದೆ.
ಐಸ್ಲೆಂಡ್ ಕ್ರಿಕೆಟ್ ಮಾಡಿದ ಈ ಟ್ವೀಟ್ ಇದೀಗ ಸಖತ್ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ತಮಾಷೆ ಎಂದು ಕಂಡರೆ, ಇನ್ನೂ ಕೆಲವರು ವೈಭವ್ ಸಾಧನೆಯನ್ನು ಕುಗ್ಗಿಸುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
14ರ ವಯಸ್ಸಿನ ಪೋರನೊಬ್ಬ ವಿಶ್ವಕಪ್ ಫೈನಲ್ನಲ್ಲಿ ಇಂತಹ ಸ್ಫೋಟಕ ಆಟ ಆಡಿದ್ದೇ ತಪ್ಪೇ? ಅರೆಸ್ಟ್ ಮಾಡುವಂತೆ ಡಿಮ್ಯಾಂಡ್ ಇಡುವಷ್ಟು ದೊಡ್ಡ ಅಪರಾಧವೇ? ಎನ್ನುವ ಪ್ರಶ್ನೆಗಳು ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಪ್ರತಿಧ್ವನಿಸುತ್ತಿವೆ.
ವೈಭವ್ ಸೂರ್ಯವಂಶಿ ಈ ವಿಚಾರದ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಒಂದು ಮಾತು ಮಾತ್ರ ಸ್ಪಷ್ಟ – ವೈಭವ್ ಆಟ ಅರೆಸ್ಟ್ ಆಗೋದು ದೂರ, ಕ್ರಿಕೆಟ್ ಇತಿಹಾಸದಲ್ಲೇ ದಾಖಲಾಗುವಂತದ್ದು.
