ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಉತ್ತರಭಾರತ ಮೂಲದ ವ್ಯಕ್ತಿಯಿಂದ ದೌರ್ಜನ್ಯ ರೀಲ್ಸ್ ಮಾಡುವಾಗ ಅಡ್ಡ ಬಂದ್ರೇ ಹುಷಾರ್ ಎಂದು ಅವಾಜ್ ಹಾಕಿದ ವ್ಯಕ್ತಿ
ಹೌದು.. ಕೆಲದಿನಗಳ ಹಿಂದೆ ಅಷ್ಟೆ ಕಬ್ಬನ್ ಪಾರ್ಕ್ ನಲ್ಲಿ ಈ ಘಟನೆಯಾಗಿದ್ದು, ಕಬ್ಬನ್ ಪಾರ್ಕ್ ನಲ್ಲಿ ಫೊಟೊ ಶೂಟ್ ಮತ್ತು ರೀಲ್ಸ್ ಮಾಡುವ ವೇಳೆ ಅಡ್ಡ ಹೋಗಿದ್ದಕ್ಕೆ ಹಲ್ಲೆ ಮಾಡಿದನೆ. ರೀಲ್ಸ್ ಮಾಡುವ ವೇಳೆ ಏಕೆ ಅಡ್ಡ ಬಂದೆ ಎಂದು ರವಿಕಿರಣ್ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದನೆ.
ಇನ್ನೂ ಇದೇ ವೇಳೆ ಪಾರ್ಕ್ನಲ್ಲಿ ವಾಕ್ ಮಾಡುವ ವೇಳೆ ಹಿಂದಿ ಭಾಷೆಯಲ್ಲಿ ನಿಂದಿಸಿ, ಪಾರ್ಕ್ ನಿಮ್ಮ ಅಪ್ಪಂದ ಧಮ್ ಇದ್ರೆ ಯಾರನ್ನ ಕರೆಸುತ್ತಿಯ ಕರೆಸು ಎಂದು ಬೆದರಿಕೆ ಯಾಕಿದ್ದಾನೆ. ಸದ್ಯ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.