
ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಬ್ಯಾಟ್ಸಮನ್ ಕಿಂಗ್ ಕೊಹ್ಲಿ ರಣಜಿ ಪಂದ್ಯಆಡುವ ಸಾಧ್ಯತೆಯಿದೆ. ಜನವರಿ 30ರಂದು ರೈಲ್ವೇಸ್ ವಿರುದ್ದ ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದೆ. ಸದ್ಯಕ್ಕೆ ಕತ್ತು ನೋವಿನಿಂದ ಬಳಲುತ್ತಿರುವ ಕೊಹ್ಲಿ ಇದಾಗಲೇ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, ಗಾಯದಿಂದ ಚೇತರಿಸಿಕೊಂಡ ಬಳಿಕ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೊಹ್ಲಿ ರೈಲ್ವೇಸ್ ವಿರುದ್ದ ಕಣಕ್ಕಿಳಿದರೆ 13 ವರ್ಷಗಳ ಬಳಿಕ ದೇಶಿ ಟೂರ್ನಿಗೆ ಕಮ್ ಬ್ಯಾಕ್ ಮಾಡಿದಂತಾಗುತ್ತದೆ. ಪ್ರಸ್ತುತ ಕೊಹ್ಲಿ ಗಾಯ ಚೇತರಿಕೆಯ ನಿರೀಕ್ಷೆಯಲ್ಲಿದ್ದಾರೆ.