
ಚಾಂಪಿಯನ್ಸ್ ಟ್ರೋಫಿ ನ್ಯೂಜಿಲೆಂಡ್ ವಿರುದ್ದ ಕಣಕ್ಕಿಳಿದ ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ 300 ಏಕದಿನ ಪಂದ್ಯ ಆಡಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ 7ನೇ ಹಾಗೂ ವಿಶ್ವದ 22ನೇ ಆಟಗಾರ ಎನ್ನಿಸಿಕೊಂಡಿದ್ದಾರೆ. ಸಚಿನ್ 463, ಧೋನಿ 347, ದ್ರಾವಿಡ್ 340, ಅಜರುದ್ದೀನ್ 334, ಗಂಗೂಲಿ 308,ಯುವರಾಜ್ 301, ಕೊಹ್ಲಿ 300 ಪಂದ್ಯಗಳನ್ನಾಡಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ 14096 ರನ್ ಗಳಿಸಿದ್ದಾರೆ ಇದರಲ್ಲಿ 51 ಶತಕ ಸಿಡಿಸಿದ್ದರೆ, 73 ಅರ್ಧಶತಕ ಬಾರಿಸಿದ್ದಾರೆ. 183 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. ಕೊಹ್ಲಿ 2011ರ ವಿಶ್ವಕಪ್ ಗೆದ್ದ ತಂಡದಲ್ಲಿ ಇದ್ದರು. 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ವಿನ್ನಿಂಗ್ ಟೀಂನ ಭಾಗವಾಗಿದ್ದರು. ಅಲ್ಲಿಂದ 2015ರ ವಿಶ್ವಕಪ್, 2019, 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಆಡಿದ್ದಾರೆ. ಧೋನಿ ನಂತರ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿ ತಂಡವನ್ನು ಮುನ್ನೆಡಿಸಿದ್ದರು. ಅವರ ಬಳಿಕ ರೋಹಿತ್ ಶರ್ಮಾ ನಾಯಕರಾಗಿ ಆಯ್ಕೆ ಆಗಿ ಪ್ರಸ್ತುತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅಭಿಷೇಕ್.ಎಸ್