
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಭಾರತ ವಿಕೆಟ್ಗಳ ಜಯ ಗಳಿಸಿದೆ. ಪಂದ್ಯ ಆರಂಭಕ್ಕೂ ಮುನ್ನ ಭಾರತ ಪಂದ್ಯ ಸೋಲುತ್ತೆ, ಕೊಹ್ಲಿ ಬ್ಯಾಟ್ ಶಬ್ದ ಮಾಡಲ್ಲ ಎಂದು ಅನೇಕರು ಭವಿಷ್ಯ ನುಡಿದಿದ್ದರು. ಆದರೆ ಪಂದ್ಯದಲ್ಲಿ ಆಗಿದ್ದೆ ಬೇರೆ. ಭಾರತ ಪಾಕ್ ವಿರುದ್ದ ಅಧಿಕಾರಯುತ್ತ ಜಯ ದಾಖಲಿಸಿತ್ತು. ಕೊಹ್ಲಿ ಕೂಡ ತಮ್ಮ 51ನೇ ಶತಕವನ್ನು ಸಿಡಿಸಿದರು. ಪಂದ್ಯ ಕೈ ಜಾರಿ ಹೋಗುತ್ತಿದ್ದಂತೆ ಪಾಕಿಸ್ತಾನ ತನ್ನ ಕುತಂತ್ರವನ್ನು ಬಳಸಿದೆ.

ಪಂದ್ಯ ಹೇಗಿದ್ದರೂ ಸೋಲುತ್ತೇವೆ ಕೊಹ್ಲಿ ಸೆಂಚುರಿ ಬಾರಿಸಬಾರದು ಎಂದು ಪಾಕ್ ವೇಗಿಗಳು ಸಖತ್ ಯೋಜನೆಯೇ ಮಾಡಿದ್ದರು. ಅದರಂತೆ ವೈಡ್ ಮೇಲೆ ವೈಡ್ ಹಾಕಿದರು. ಪಾಕ್ ವೇಗಿ ಶಾಹೀನ್ ಆಫ್ರಿದಿ 42ನೇ ಓವರ್ ಬೌಲ್ ಮಾಡಲು ಬಂದರು. ಓವರ್ನ 3 ಎಸೆತದಲ್ಲಿ ಲಾಂಗ್ ವೈಡ್ ಹಾಕಿದರು. ಇದಾದ ಬಳಿಕ ಮತ್ತೆ ಎರಡು ವೈಡ್ಗಳನ್ನು ಎಸೆದು ಒಟ್ಟು 4 ವೈಡ್ ಹಾಕಿ ಕೊಹ್ಲಿ ಸೆಂಚುರಿಗೆ ಅಡ್ಡಿಪಡಿಸಿದರು. ಆದರೂ ಕೊನೆಯ ಓವರ್ನಲ್ಲಿ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ಸಿಕ್ಕಿತ್ತು. ಖುಶ್ದಿಲ್ ಶಾ ಎಸೆದ ಓವರ್ನಲ್ಲಿ ಕೊಹ್ಲಿ 1 ರನ್ ಗಳಿಸಿದರು . ಮರು ಎಸೆತದಲ್ಲಿ ಅಕ್ಷರ್ ಪಟೇಲ್ 1 ರನ್ ಗಳಿಸಿ ಮತ್ತೆ ಕೊಹ್ಲಿಗೆ ಸ್ಟ್ರೈಕ್ ನೀಡಿದರು. ಆ ಓವರ್ನ ಮೂರನೇ ಎಸೆತದಲ್ಲಿ ಕೊಹ್ಲಿ ಪೋರ್ ಬಾರಿಸಿ 51 ಶತಕ ಗಳಿಸಿದರು. ಕೊಹ್ಲಿ ಶತಕ ತಪ್ಪಿಸಲು ಪ್ರಯತ್ನಿಸಿದ್ದ ಶಾಹೀನ್ ಆಫ್ರಿದಿ ಸಪ್ಪೆ ಮುಖದೊಂದಿಗೆ ಕೊಹ್ಲಿ ಕೈ ಕುಲುಕಿ ಅಭಿನಂದನೆ ತಿಳಿಸಿದರು..

ಅಭಿಷೇಕ್ ಎಸ್