ಹುಬ್ಬಳ್ಳಿ : ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಹಾಯ, ಸಹಕಾರ, ಬೆಂಬಲ ಯಾವತ್ತೂ ಮರೆಯುವುದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹುಬ್ಬಳಿಯಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ ಕಾರ್ಯಕರ್ತರು ದಣಿವರಿಯದೇ ಕೆಲಸ ಮಾಡಿ ನನ್ನನ್ನು ಗೆಲ್ಲಿಸುತ್ತ ಬಂದಿದ್ದಾರೆ, ಈಗಲೂ ಭರತ್ ಬೊಮ್ಮಾಯಿ ಅವರನ್ನು ನನಗಿಂತ ಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡು ಬರುವ ಶಕ್ತಿ ಕಾರ್ಯಕರ್ತರಲ್ಲಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೂ ಮುಖ್ಯಮಂತ್ರಿ, ಸಚಿವರು ಸೇರಿ ರಾಜ್ಯ ಸರ್ಕಾರವೇ ಕ್ಷೇತ್ರದಲ್ಲಿ ನಿಂತಿದೆ. ಆದರೆ, ಕಾರ್ಯಕರ್ತರು ಕಾಂಗ್ರೆಸ್ ನವರ ಹುನ್ನಾರಕ್ಕೆ ಬಲಿಯಾಗಬಾರದು. ಶಿಗ್ಗಾಂವಿ ಸವಣೂರಿನ ಅಸ್ಮಿತೆಯನ್ನು ಉಳಿಸಿಕೊಳ್ಳಿ, ಮತ್ತೊಮ್ಮೆ ಬಿಜೆಪಿ ಪರವಾಗಿ ಜನರ ಮನೆಗೆ ಹೋಗಿ ಭರತ ಪರವಾಗಿ ಮತ ಕೇಳಿ ಎಂದು ವಿನಂತಿಸಿಕೊಂಡರು. ಪ್ರವಾಹ ಬಂದಾಗ ರೈತರಿಗಾಗಿ ಎರಡು ಪಟ್ಟು ಪರಿಹಾರ ಒದಗಿಸಿದೆ. ಕ್ಷೇತ್ರದ ನೀರಾವರಿಗೆ 25 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ. ಸಿಎಂ ಸಿದ್ದರಾಮಯ್ಯನವರೇ ರೈತರ ಬಗ್ಗೆ ಕಳಕಳಿ ಇದ್ದರೆ ಇಷ್ಟು ಹಣ ನೀವು ಕೊಡಿ ಎಂದು ಸವಾಲು ಎಸೆದರು.