ಪಚ್ಚೆ ಹೆಸರು ಎಂದು ಕರೆಯಲ್ಪಡುವ ಹೆಸರು ಕಾಳು ಚಿಕ್ಕದಾದ ಗಾತ್ರದ ಹಸಿರು ಬಣ್ಣದಲ್ಲಿ ಇದ್ದು, ನೋಡಲು ಇದು ಚಿಕ್ಕ ಕಾಳಾಗಿದ್ದರೂ ಇದರಲ್ಲಿ ಸಾಕಷ್ಟು ಅದ್ಭುತ ಆರೋಗ್ಯ ಗುಣಗಳಿವೆ. ಆಹಾರ ಜೊತೆಗೆ ಹೆಸರು ಕಾಳು ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಇದ್ದರೂ ಗುಣಮುಖವಾಗುತ್ತಿದ್ದು, ಹೆಸರು ಕಾಳು ಸಮತೋಲಿತ ಆಹಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಈ ಹೆಸರು ಕಾಳುಗಳು ತೂಕ ಇಳಿಕೆಗೆ ಮಾತ್ರವಲ್ಲದೇ ಹಲವು ಪ್ರಯೋಜನಗಳನ್ನು ಹೊಂದಿವೆ. ಹಾಗಾದ್ರೆ ಹೆಸರು ಕಾಳನ್ನು ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದು ಈ ಸುದ್ದಿಯಲ್ಲಿ ತಿಳಿಯೋಣ ಬನ್ನಿ.
ಹೌದು ಸಾಮಾನ್ಯವಾಗಿ ಅಡುಗೆ ಮಾಡಲು ವಿವಿಧ ರೀತಿಯ ಬೇಳೆಕಾಳುಗಳು ಮತ್ತು ಧಾನ್ಯಗಳನ್ನು ಬಳಸಲಾಗುತ್ತಿದ್ದು, ನಾವು ಸೇವಿಸುವ ಆಹಾರದಲ್ಲಿ ಬೇಳಕಾಳುಗಳು ಪ್ರಮುಖ ಪಾತ್ರವಸಿದೆ. ಅದರಲ್ಲೂ ಹೆಸರು ಕಾಳು ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದ್ದಾಗಿದ್ದು, ಇದನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ನೀವು ಕಾಣಬಹುದ್ದಾಗಿದೆ.
ಇನ್ನೂ ಹೆಸರು ಕಾಳು ಪ್ರೋಟೀನ್, ಫೈಬರ್, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಸೂಪರ್ ಫುಡ್ ಆಗಿದ್ದು, ಈ ಎಲ್ಲಾ ಪೋಷಕಾಂಶಗಳು ಚಯಾಪಚಯ, ಜೀರ್ಣಕ್ರಿಯೆ ಮತ್ತು ಸ್ನಾಯುವಿನ ಕಾರ್ಯವನ್ನು ಸುಧಾರಿಸುತ್ತದೆ. ಹೆಸರು ಕಾಳಿನಲ್ಲಿ ನಾರಿನಂಶ ಹೇರಳವಾಗಿದ್ದು , ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಸಾಕಷ್ಟು ದೈನಂದಿನ ಫೈಬರ್ ಸೇವನೆಯು ಕರುಳಿನ ಆರೋಗ್ಯವನ್ನು ಸುಧಾರಿಸುತ್ತಿದ್ದು, ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ತೂಕ ಇಳಿಕೆಗೂ ಇದು ಸಹಕಾರಿ ಆಗಿದೆ. ಅಲ್ಲಾದೆ ಈ ಕಾಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣವು ದೇಹಕ್ಕೆ ಲಭ್ಯವಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಲಬದ್ಧತೆ ಸಮಸ್ಯೆಯ ಜೊತೆಗೆ, ಕಡಿಮೆ ಕ್ಯಾಲೋರಿಗಳಿಂದ ತೂಕವನ್ನು ಸಹ ಕಡಿಮೆ ಮಾಡಬಹುದು.
ಅಷ್ಟೆ ಅಲ್ಲಾದೆ ಹೆಸರು ಕಾಳು ಬಿಪಿಯನ್ನು ಸಹ ನಿಯಂತ್ರಣ ಮಾಡುತ್ತಿದ್ದು, ಚರ್ಮದ ಸಮಸ್ಯೆ , ಮತ್ತು ಬೆವರುವಿಕೆಯಿಂದ ಬಳಲುತ್ತಿರುವವರು ತಮ್ಮ ಆಹಾರದ ಭಾಗವಾಗಿ ಹೆಸರು ಕಾಳನ್ನು ಸೇವಿಸಬೇಕು. ಹೆಸರು ಕಾಳು ದೇಹದಲ್ಲಿನ ಶಾಖವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿವೆ. ಅಷ್ಟೇ ಅಲ್ಲದೇ, ಈ ಹೆಸರು ಕಾಳು ಹೃದಯದ ಆರೋಗ್ಯವನ್ನು ಕೂಡ ಸುಧಾರಿಸುವುದರ ಜೊತೆಗೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ , ಆ್ಯಂಟಿಆಕ್ಸಿಡೆಂಟ್ಗಳು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹೆಸರು ಕಾಳು ಮಧುಮೇಹವನ್ನು ಕಡಿಮೆ ಮಾಡುವ ಅತ್ಯುತ್ತಮ ಆಹಾರವಾಗಿದ್ದು , ಹೆಸರು ಕಾಳು ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ತ್ವರಿತವಾಗಿ ಬರುವುದಿಲ್ಲ . ಇದರಿಂದ ಸಕ್ಕರೆಯ ಮಟ್ಟವು ಇದ್ದಕ್ಕಿದ್ದಂತೆ ಏರಿಕೆ ಆಗುವುದಿಲ್ಲ.