Ashwaveega News 24×7 ಜನವರಿ 9 – ಮೈಸೂರಲ್ಲಿ ಪೊಲೀಸರ ಮುಂದೆ ವ್ಹೀಲಿಂಗ್ ಮಾಡ್ತಿದ್ದ ಪುಂಡರಿಗೆ ಹೆಡೆಮುರಿ ಕಟ್ಟಿದ ಪೊಲೀಸರು.
ಎರಡು ದಿನದ ಹಿಂದೆ ಪೊಲೀಸರ ಮುಂದೆಯೇ ವೀಲಿಂಗ್ ಮಾಡಿದ್ದ ಪುಂಡರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ .ವೀಲಿಂಗ್ ದೃಶ್ಯ ಸಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ .
ಇದೀಗ ವೀಲಿಂಗ್ ಮಾಡಿದ್ದ ಯುವಕರನ್ನು ನರಸಿಂಹರಾಜ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೀಲಿಂಗ್ ಮಾಡಿದ್ದ ಇಬ್ಬರು ಅಪ್ರಾಪ್ತ ವಯಸ್ಕರಾಗಿದ್ದಾರೆ . ಅದಕ್ಕೆ ಪೋಷಕರು ನಮ್ಮ ಮಕ್ಕಳು ಮಾಡಿದ್ದ ತಪ್ಪಿಗೆ ತಲೆ ತಗ್ಗಿಸುವಂತಾಗಿದೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಡಬೇಡಿ ಎಂದು
ಕೈ ಮುಗಿದ ಪೋಷಕರು ಕೇಳಿಕೊಂಡಿದ್ದಾರೆ ….
