
ಐಪಿಎಲ್ನಲ್ಲಿ ಪ್ರಮುಖ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಲ್ಲಿವರೆಗೆ 7 ನಾಯಕರನ್ನು ಆಯ್ಕೆ ಮಾಡಿಕೊಂಡಿದೆ. ರಜತ್ ಪಾಟಿದಾರ್ 8ನೇ ನಾಯಕನ್ನಾಗಿ 2025ರ ಐಪಿಎಲ್ ಆವೃತ್ತಿಗೆ ಆಯ್ಕೆಯಾಗಿದ್ದಾರೆ. ಅದರಂತೆ ಬೆಂಗಳೂರು ತಂಡ ರಜತ್ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಆದರೆ ಟೂರ್ನಿ ಇತಿಹಾಸದಲ್ಲಿ ಆರ್ಸಿಬಿಗೆ 7 ಮಂದಿ ನಾಯಕರಾಗಿ ಆರ್ಸಿಬಿಯನ್ನು ಮುನ್ನಡೆಸಿದ್ದಾರೆ.

2008- ರಾಹುಲ್ ದ್ರಾವಿಡ್ (14 ಪಂದ್ಯ, 4 ಜಯ)
2009 – ಕೆವಿನ್ ಪೀಟರ್ಸನ್ (6 ಪಂದ್ಯ 2 ಜಯ)
2009-10- ಅನಿಲ್ ಕುಂಬ್ಳೆ (35 ಪಂದ್ಯ 19 ಜಯ )
2011-12 – ಡೇನಿಯಲ್ ವೆಟ್ಟೋರಿ (28 ಪಂದ್ಯ 15 ಜಯ )
2013-2021 – ವಿರಾಟ್ ಕೊಹ್ಲಿ (143 ಪಂದ್ಯ 66 ಜಯ )
2017 – ಶೇನ್ ವಾಟ್ಸನ್ ( 3 ಪಂದ್ಯ 1 ಜಯ )
2022-24- ಫಾಫ್ ಡು ಪ್ಲೆಸಿಸ್ ( 42 ಪಂದ್ಯ 21 ಜಯ )
2025- ರಜತ್ ಪಾಟಿದರ್
ಐಪಿಎಲ್ನಲ್ಲಿ ಆರ್ಸಿಬಿ ಒಟ್ಟು ಮೂರು ಬಾರಿ ಫೈನಲ್ ತಲುಪಿದೆ. ಆ ಮೂರು ಫೈನಲ್ನಲ್ಲಿಯೂ ಆರ್ಸಿಬಿ ಮುಗ್ಗರಿಸಿದೆ.
2009- ಡೆಕ್ಕನ್ ಚಾರ್ಜಸ್ ವಿರುದ್ದ ಆರ್ಸಿಬಿಗೆ 6 ರನ್ಗಳ ಸೋಲು
2011- ಸಿಎಸ್ಕೆ ವಿರುದ್ದ ಆರ್ಸಿಬಿಗೆ 58 ರನ್ಗಳ ಸೋಲು
2016 – ಎಸ್ಆರ್ಹೆಚ್ ವಿರುದ್ದ ಆರ್ಸಿಬಿಗೆ 8 ರನ್ಗಳ ಸೋಲು

ಆರ್ಸಿಬಿ ತಂಡದಲ್ಲಿದ್ದ ಪ್ರಮುಖ ಆಟಗಾರರರು
ರಾಹುಲ್ ದ್ರಾವಿಡ್ , ಅನಿಲ್ ಕುಂಬ್ಳೆ, ಕೆವಿನ್ ಪೀಟರ್ಸನ್, ರಾಸ್ ಟೇಲರ್, ಡೇನಿಯಲ್ ವೆಟೋರಿ, ಜಹೀರ್ ಖಾನ್ , ಪ್ರವೀಣ್ ಕುಮಾರ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಮಯಾಂಕ್ ಅಗರ್ವಾಲ್, ತಿಲಕರತ್ನೆ ದಿಲ್ಯನ್, ಕ್ರಿಸ್ ಗೇಲ್,ಎಬಿಡಿ ವಿಲಿಯರ್ಸ್,ಯುವರಾಜ್ ಸಿಂಗ್,ವಿನಯ್ ಕುಮಾರ್, ದಿನೇಶ್ ಕಾರ್ತಿಕ್,ಶೇನ್ ವಾಟ್ಸನ್ ,ಕೆಎಲ್ ರಾಹುಲ್,ಎಸ್ ಅರವೀಂದ್,ಮಿಚೆಲ್ ಸ್ಟಾರ್ಕ್ ,ಗ್ಲೆನ್ ಮ್ಯಾಕ್ಸ್ವೆಲ್,ಡೇಲ್ ಸ್ಟೇನ್,ಫಾಪ್ ಡು ಪ್ಲೆಸಿಸ್
ಅಭಿ಼ಷೇಕ್ ಎಸ್