Ashwaveega News 24×7 ಜನವರಿ 09 – IPL 2026 – ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಪಂದ್ಯಗಳನ್ನು ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸುವುದು ಅನುಮಾನವಾಗಿದೆ. ಈ ಕಾರಣದಿಂದ RCB ತನ್ನ ತವರು ಪಂದ್ಯಗಳನ್ನು ಬೇರೆಡೆ ಆಡಬೇಕಿದ್ದು, ಮಹಾರಾಷ್ಟ್ರದ ಪುಣೆ ಕ್ರಿಕೆಟ್ ಮೈದಾನದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 2026ರ IPL ನಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಆದಾಗ್ಯೂ, ಬೆಂಗಳೂರು ಅಭಿಮಾನಿಗಳಿಗೆ ದೊಡ್ಡ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಐಪಿಎಲ್ ಬೆಂಗಳೂರಿನಿಂದ ಬೇರೆಡೆ ಸ್ಥಳಾಂತರ ಸಾಧ್ಯತೆ ಹೆಚ್ಚಿದೆ. ಹೊಸ ಹೋಂ ಗ್ರೌಂಡ್ ಹುಡುಕುತ್ತಿರುವ RCB ಇದೀಗ 2026ರ ತನ್ನ ಪಂದ್ಯಗಳನ್ನು ಮಹಾರಾಷ್ಟ್ರದ ಪುಣೆ ಕ್ರಿಕೆಟ್ ಸಂಸ್ಥೆಯಲ್ಲಿ ಆಡಲು ಆಸಕ್ತಿ ತೋರುತ್ತಿದೆ ಎನ್ನಲಾಗಿದೆ. ಒಂದು ವೇಳೆ ಪುಣೆ ಫೈನಲ್ ಆದ್ರೆ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗಲಿದೆ.
ಪುಣೆಯಲ್ಲಿ RCB ಪಂದ್ಯಗಳು:
ಹೌದು, ಕಳೆದ ಬಾರಿ ಕಪ್ ಗೆದ್ದ ಬಳಿಕ RCB ವಿಜಯೋತ್ಸವದ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು. ಇದರಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂ ದೊಡ್ಡ ಕಾರ್ಯಕ್ರಮಗಳ ಆಯೋಜನೆಗೆ ಯೋಗ್ಯವಲ್ಲ ಎಂದು ಈಗಾಗಲೇ ಸಮಿತಿ ವರದಿ ನೀಡಿದ್ದು, ಸರ್ಕಾರ ಸಹ ಚಿನ್ನಸ್ವಾಮಿಯಲ್ಲಿ ಐಪಿಎಲ್ ಹಾಗೂ ಯಾವುದೇ ಅಂತರಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡುತ್ತಿಲ್ಲ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಸಹ ಚಿನ್ನಸ್ವಾಮಿ ಮೈದಾನದಿಂದ ಸ್ಥಳಾಂತರಿಸಲಾಗಿದೆ. ಹೀಗಾಗಿ RCB ಐಪಿಎಲ್ ಪಂದ್ಯಗಳನ್ನು ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸುವುದು ಅನುಮಾನವಾಗಿದೆ. ಈ ಕಾರಣದಿಂದ RCB ತನ್ನ ತವರು ಪಂದ್ಯಗಳನ್ನು ಬೇರೆಡೆ ಆಡಬೇಕಿದ್ದು, ಮಹಾರಾಷ್ಟ್ರದ ಪುಣೆ ಕ್ರಿಕೆಟ್ ಮೈದಾನದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.
