Ashwaveega News 24×7 ಏಪ್ರಿಲ್ 13 – 2026 : ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಅವರು ಜೆಡಿಎಸ್ ಸೇರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಲಕ್ಷ್ಮಣ ಸವದಿ, ಜಾರಕಿಹೊಳಿ ವಿರುದ್ಧ ತೀವ್ರ ಕೌಂಟರ್ ನೀಡಿದ್ದಾರೆ.“ರಮೇಶ್ ಜಾರಕಿಹೊಳಿಯೇ ಬಿಜೆಪಿಯಲ್ಲಿ ಉಳಿಯುವುದಿಲ್ಲ. ಅವರು ಜೆಡಿಎಸ್ ಸೇರುವ ಚಿಂತನೆದಲ್ಲಿದ್ದಾರೆ,” ಎಂದು ಸವದಿ ಹೇಳಿದ್ದಾರೆ.
ಇದೇ ವೇಳೆ, “ನನ್ನ ಬಗ್ಗೆ ಕೆಲವರು ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಂತಹ ಬೆಳವಣಿಗೆಗಳ ಕಡೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ,” ಎಂದು ಹೇಳಿದರು.
ತನ್ನ ರಾಜಕೀಯ ಭವಿಷ್ಯದ ಕುರಿತು ಸ್ಪಷ್ಟಪಡಿಸಿದ ಸವದಿ, “ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಬಗ್ಗೆ ಮಾತನಾಡುವವರೇ ಬೇರೆ ಪಕ್ಷಕ್ಕೆ ಹೋಗುವ ಪರಿಸ್ಥಿತಿ ಬರುತ್ತದೆ,” ಎಂದು ತಿರುಗೇಟು ನೀಡಿದರು.
ಇದರಿಂದ ಬೆಳಗಾವಿ ರಾಜಕೀಯದಲ್ಲಿ ಹೊಸ ಚರ್ಚೆಗಳು ಹುಟ್ಟಿಕೊಂಡಿದ್ದು, ಬಿಜೆಪಿ ಮತ್ತು ಜೆಡಿಎಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
