
ವುಮೆನ್ಸ್ ಪ್ರೀಮಿಯರ್ ಲೀಗ್ನ 3ನೇ ಆವೃತ್ತಿಯಲ್ಲಿ ಆರ್ಸಿಬಿ ಸತತ ಎರಡನೇ ಜಯ ದಾಖಲಿಸಿದೆ. ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಬ್ಯಾಟಿಂಗ್ ಮಾಡಲು ಬಂದ ಡೆಲ್ಲಿ ಬ್ಯಾಟರ್ಗಳನ್ನು ಬಂದಷ್ಟು ವೇಗಕ್ಕೆ ಪೆವಿಲಿಯನ್ಗೆ ಕಳುಹಿಸಿದರು. ಜೆಮಿಮಾ (34), ಸಾರಾ ಬ್ರೈಸ್ (23), ಅನ್ನಾಬೆಲ್ ಸದರ್ಲ್ಯಾಂಡ್ (19),ಮೆಗ್ ಲ್ಯಾನಿಂಗ್ (17),ಶಿಖಾ ಪಾಂಡೆ (14), ಶಫಾಲಿ ವರ್ಮಾ (0) ಅವರ ನೀರಸ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡ 19.3 ಓವರ್ಗಳಲ್ಲಿ 141 ರನ್ಗಳಿಗೆ ಅಲೌಟ್ ಆಯಿತ್ತು. ಆರ್ಸಿಬಿ ಪರ ರೇಣುಕಾ ಸಿಂಗ್ 3, ಕಿಮ್ ಗಾರ್ತ್ 2, ಏಕ್ಗತಾ ಬಿಷ್ತ್ 2, ಜಾರ್ಜಿಯಾ ವೇರ್ಹ್ಯಾಮ್ 3 ವಿಕೆಟ್ ಪಡೆದರು.
ಸ್ಪೋಟಕ ಅರ್ಧಶತಕ ಸಿಡಿಸಿದ ನಾಯಕಿ ಸ್ಮೃತಿ ಮಂಧಾನ
142 ರನ್ಗಳ ಟಾರ್ಗೆಟ್ ಮಾಡಿದ ಆರ್ಸಿಬಿ ಆರಂಭದಿಂದಲೇ ಡೆಲ್ಲಿ ಬೌಲರ್ಗಳನ್ನು ಬೆಂಡೆತ್ತಿದ್ದರು. ನಾಯಕಿ ಸ್ಮೃತಿ ಮಂಧಾನ (81) ಅವರ ಆರ್ಧ ಶತಕ ಬಲದಿಂದ ಆರ್ಸಿಬಿ ಬಹಳ ಸುಲಭವಾಗಿ ಟಾರ್ಗೆಟ್ ಚೇಸ್ ಮಾಡಿತ್ತು, 47 ಎಸೆತಗಳನ್ನು ಎದುರಿಸಿದ ಸ್ಮೃತಿ ಮಂಧಾನ 10 ಪೋರ್, 3 ಸಿಕ್ಸರ್ ಒಳಗೊಂಡು ಒಟ್ಟು 81 ರನ್ ಗಳಿಸಿದರು. ಮಂಧಾನಗೆ ಡೇನಿಯಲ್ ವ್ಯಾಟ್ ಹಾಡ್ಜ್ (42) ಸಾಥ್ ನೀಡಿದರು. ಇವರಿಬ್ಬರು ಔಟ್ ಆಗುತ್ತಿದ್ದಂತೆ ಎಲ್ಲಿಸ್ ಪ್ರೆರಿ (7),ರಿಚಾ ಘೋಷ್ (11) ರನ್ ಗಳಿಸಿ ಆರ್ಸಿಬಿಯನ್ನು ಗೆಲ್ಲುವಿನ ದಡ ಸೇರಿಸಿದರು. ಡೆಲ್ಲಿ ವಿರುದ್ದದ ಜಯದೊಂದಿಗೆ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿದೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ: ರಿಚಾ ಘೋಷ್
ಅಭಿಷೇಕ್ ಎಸ್