
ವುಮೆನ್ಸ್ ಪ್ರೀಮಿಯರ್ ಲೀಗ್ನ ಸೀಸನ್ 3ರಲ್ಲಿ ಡೆಲ್ಲಿ ತಂಡ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದೆ. ಆ ಮೂಲಕ ಪೈನಲ್ನಲ್ಲಿ ಹ್ಯಾಟ್ರಿಕ್ ಬಾರಿ ಆಡಲಿರುವ ತಂಡ ಎಂಬ ಸಾಧನೆ ಮಾಡಿದೆ. ಆಡಿದ 8 ಪಂದ್ಯಗಳಿಂದ 3ರಲ್ಲಿ ಸೋತು 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೇ ಮಾರ್ಚ್ 15ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ಆಡಲಿದೆ. ಅದಕ್ಕೂ ಮುನ್ನ ನಾಳೆ ನಡೆಯಲಿರುವ ಎಲಿಮೆನೆಟರ್ ಪಂದ್ಯದಲ್ಲಿ ಗುಜರಾತ್ ಹಾಗೂ ಮುಂಬೈ ತಂಡಗಳು ಹೋರಾಟ ಮಾಡಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡಗಳು ಪ್ರಶಸ್ತಿಗಾಗಿ ಮಾರ್ಚ್ 15ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಹೋರಾಟ ನಡೆಸಬೇಕಿದೆ. ಟೂರ್ನಿ ಆರಂಭವಾಗಿ 3 ಸೀಸನ್ ಆಗಿದೆ. ಮೂರು ಸೀಸನ್ನಲ್ಲೂ ಡೆಲ್ಲಿ ತಂಡ ಫೈನಲ್ಗೆ ಎಂಟ್ರಿ ನೀಡಿದೆ. ಮೊದಲ ಬಾರಿ ಫೈನಲ್ನಲ್ಲಿ ಡೆಲ್ಲಿ ಮುಂಬೈ ವಿರುದ್ದ ಸೋಲು ಕಂಡಿತ್ತು. ಸೀಸನ್ 2ರಲ್ಲಿ ಫೈನಲ್ ತಲುಪಿದ್ದ ಡೆಲ್ಲಿ ಆರ್ಸಿಬಿ ವಿರುದ್ದ ಸೋತು ಸತತ ಎರಡನೇ ಬಾರಿಯೂ ಕೂಡ ನಿರಾಸೆ ಅನುಭವಿಸಿತು. ಆದರೆ ಇದೀಗ ಸೀಸನ್ 3ರಲ್ಲಿಯೂ ಕೂಡ ಫೈನಲ್ ತಲುಪಿರುವ ಡೆಲ್ಲಿ ಈ ಬಾರಿಯಾದರೂ ಟ್ರೋಫಿ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಅಭಿಷೇಕ್ ಎಸ್