
ವುಮೆನ್ಸ್ ಪ್ರೀಮಿಯರ್ ಲೀಗ್ ಅಂತಿಮ ಹಂತದತ್ತ ಸಾಗುತ್ತಿದೆ. ಟೂರ್ನಿಯಲ್ಲಿ ಕೆಲ ತಂಡಗಳ ಲೆಕ್ಕಚಾರಗಳು ತಲೆಕಳಗಾಗಿದ್ದರೆ, ಇನ್ನೂ ಕೆಲ ತಂಡಗಳ ಯೋಜನೆಗಳು ಯಶಸ್ವಿಯಾಗಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲೆರಡು ಸ್ಥಾನದ ಮೇಲೆ ಕಣ್ಣಿಟ್ಟಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ತಂಡ 9 ರನ್ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಮುಂಬೈ ತಂಡ 10 ಅಂಕದೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ತಂಡ ಆಗ್ರಸ್ಥಾನದಲ್ಲಿ ಮುಂದುವರೆದಿದೆ. ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ (54) ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ 20 ಓವರ್ಗಳಿಗೆ 179 ರನ್ಗಳನ್ನು ಗಳಿಸಿತು. 180ರನ್ಗಳ ದೊಡ್ಡ ಗುರಿ ಪಡೆದ ಜೈಂಟ್ಸ್ ತಂಡವು 170 ರನ್ಗಳಿಗೆ ತನ್ನ ಹೋರಾಟ ಮುಗಿಸಿತು. ಗುಜರಾತ್ ಪರ ಫುಲ್ಮಾಲಿ (61) ಹೋರಾಟ ಮಾಡಿದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲಾಗಲಿಲ್ಲ.

ಅಭಿಷೇಕ್. ಎಸ್