
2025ರ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಮೊದಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಮಾಡಿದೆ. ಟಾಸ್ ಗೆದ್ದು ಬೌಲಿಗ್ ಆಯ್ಕೆ ಮಾಡಿಕೊಂಡ ನಾಯಕಿ ಸ್ಮೃತಿ ಮಂದನಾ ನಿರ್ಧಾರ ಸರಿ ಎಂಬಂತೆ ಬೌಲರ್ಗಳು ಸಹ ಉತ್ತಮ ಬೌಲಿಂಗ್ ಮಾಡಿದರು. ಪವರ್ ಪ್ಲೇನಲ್ಲೇ ಲಾರಾ ವೊಲ್ವಾರ್ಡ್ವ್ (6) ,ದಯಾಳನ್ ಹೇಮಲತಾ (4)ಅವರ ವಿಕೆಟ್ ಪಡೆದರು. ಇವರ ನಂತರ ಬಂದ ಬೆತ್ ಮೂನಿ (56),ಆಶ್ಲೀ ಗಾರ್ಡ್ನರ್ (79) ಆರ್ಸಿಬಿ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದರು. ಡಿಯಾಂಡ್ರಾ ಡಾಟಿನ್ (25) ಅವರ ಬ್ಯಾಟಿಂಗ್ ನೆರವಿನಿಂದ ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 201/5 ಕಲೆ ಹಾಕಿತ್ತು. ಆರ್ಸಿಬಿ ಪರ ರೇಣುಕಾ ಸಿಂಗ್ (2), ಕನಿಕಾ ಅಹುಜಾ (1), ಜಾರ್ಜಿಯಾ ವೇರ್ಹ್ಯಾಮ್ (1), ಪ್ರೇಮಾ ರಾವತ್ (1) ತಲಾ ಒಂದು ವಿಕೆಟ್ ಪಡೆದುಕೊಂಡರು.

ಆರ್ಸಿಬಿಗೆ ಆರಂಭಿಕ ಆಘಾತ
202 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ಆರಂಭದಲ್ಲೇ ನಾಯಕಿ ಸ್ಮೃತಿ ಮಂದನಾ ( 9) ಅವರ ವಿಕೆಟ್ ಕಳೆದುಕೊಂಡಿತ್ತು. ಡೇನಿಯಲ್ ವ್ಯಾಟ್ ಹಾಡ್ಜ್ (4) ಕೂಡ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಎಲ್ಲಿಸ್ ಪೆರ್ರಿ (57).ರಾಘ್ವಿ ಬಿಸ್ಟ್ (25), ರಿಚಾ ಘೋಷ್ (64),ಕನಿಕಾ ಅಹುಜಾ (30) ಅವರ ಬ್ಯಾಟಿಂಗ್ ಸಹಾಯದಿಂದ ಆರ್ಸಿಬಿ 18.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 202 ರನ್ ಗಳನ್ನು ಗರಿಷ್ಠ ರನ್ ಚೇಸ್ ಮಾಡಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸುವುದರ ಜೊತೆಗೆ ಮೊದಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಮಾಡಿತ್ತು.
ಪಂದ್ಯ ಶೇಷ್ಠ ಪ್ರಶಸ್ತಿ: ರಿಚಾ ಘೋಷ್
ಅಭಿಷೇಕ್ ಎಸ್