
ಐಪಿಎಲ್ 2025ರ ಸೀಸನ್ನಲ್ಲಿ ಆರ್ಸಿಬಿಗೆ ಮೊದಲ ಸೋಲು ತವರಿನಲ್ಲೇ ಎದುರಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ಗಳನ್ನು ಕಲೆ ಹಾಕಿತ್ತು. ಆರ್ಸಿಬಿ ನೀಡಿದ ಟಾರ್ಗೆಟ್ ಮುಂಬೈ ಕೊನೆ ಓವರ್ನಲ್ಲಿ ಚೇಸ್ ಮಾಡಿ ಆರ್ಸಿಬಿಗೆ ಮೊದಲ ಸೋಲಿನ ಆಘಾತ ನೀಡಿತ್ತು. ಆರ್ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಸ್ಮೃತಿ ಮಂಧಾನ (26),ವ್ಯಾಟ್ ಹಾಡ್ಜ್ (9) ಬೇಗನೇ ಔಟಾದರು.

ಎಲ್ಲಿಸ್ ಪೆರ್ರಿ (81), ರಾಘ್ವಿ ಬಿಸ್ಟ್ (1), ಕನಿಕಾ ಅಹುಜಾ (3),ರಿಚಾ ಘೋಷ್ (28),ಅವರ ಬ್ಯಾಟಿಂಗ್ನಿಂದ ಆರ್ಸಿಬಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಮುಂಬೈ ಪರ ಅಮನ್ಜೋತ್ ಕೌರ್ 3 ವಿಕೆಟ್ ಪಡೆದು ಮಿಂಚಿದರೆ, ಸಂಸ್ಕೃತಿ ಗುಪ್ತಾ ,ಶಬ್ನಿಮ್ ಇಸ್ಮಾಯಿಲ್,,ನ್ಯಾಟ್ ಸ್ಕಿವರ್ ಬ್ರಂಟ್,ಹೇಲಿ ಮ್ಯಾಥ್ಯೂಸ್ ತಲಾ 1 ವಿಕೆಟ್ ಪಡೆದರು. 168 ರನ್ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ಯಾಸ್ತಿಕಾ ಭಾಟಿಯಾ (8),ಹೇಲಿ ಮ್ಯಾಥ್ಯೂಸ್ (15),ನ್ಯಾಟ್ ಸ್ಕಿವರ್ ಬ್ರಂಟ್ (42),ನಾಯಕಿ ಹರ್ಮನ್ ಪ್ರೀತ್ ಕೌರ್ (50),ಅಮನ್ಜೋತ್ ಕೌರ್ (34) ಬ್ಯಾಟಿಂಗ್ ಸಹಾಯದಿಂದ ಸೀಸನ್ 1ರ ಚಾಂಪಿಯನ್ ಮುಂಬೈ ಯಶಸ್ವಿಯಾಗಿ ಗುರಿ ಮುಟ್ಟಿತ್ತು. ಮೊದಲೆರಡು ಪಂದ್ಯದಲ್ಲಿ ಜಯ ಕಂಡಿದ್ದ ಆರ್ಸಿಬಿ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಸೋಲು ಕಂಡಿತ್ತು.
ಪಂದ್ಯ ಶ್ರೇಷ್ಠ: ಅಮನ್ಜೋತ್ ಕೌರ್
ಅಭಿಷೇಕ್ ಎಸ್