Ashwaveega News 24×7 ಫೆಬ್ರವರಿ 06 -2026 – ಮೈಸೂರು – ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ “ಪವರ್ ಫೈಟ್” ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಬಿಗ್ ಟ್ವಿಸ್ಟ್ ನೀಡಿದ್ದಾರೆ. ತಮ್ಮ ತಂದೆ ಸಿದ್ದರಾಮಯ್ಯ ಐದು ವರ್ಷ ಸಂಪೂರ್ಣವಾಗಿ ಮುಖ್ಯಮಂತ್ರಿ ಆಗಿರುತ್ತಾರೆ ಎಂಬ ಸ್ಪಷ್ಟ ಹೇಳಿಕೆಯನ್ನು ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ನೀಡಿದ್ದಾರೆ.
“ಹೈಕಮಾಂಡ್ ನೇರವಾಗಿ ಹೇಳದೆ ಇರಬಹುದು. ಆದರೆ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಪರವಾಗಿ ಸ್ಪಷ್ಟ ಸಿಗ್ನಲ್ ಕೊಟ್ಟಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಯತೀಂದ್ರ ಹೇಳಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಅವರನ್ನು ಇಳಿಸಬೇಕು ಎಂದು ಯಾರೂ ಕೇಳ್ತಿಲ್ಲ ಎಂದು ಅವರು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಕುರ್ಚಿಯಿಂದ ಮುಖ್ಯಮಂತ್ರಿಯಾಗುವ ಕನಸು ಕಾಣ್ತಿರುವ ಹೊತ್ತಲ್ಲೇ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಾಂಬ್ ಸಿಡಿಸಿದಂತಾಗಿದೆ. ಸಿಎಂ ಪುತ್ರನ ಈ ಓಪನ್ ಸ್ಟೇಟ್ಮೆಂಟ್ ಡಿಕೆ ಶಿವಕುಮಾರ್ ಹಾಗೂ ಅವರ ತಂಡಕ್ಕೆ ಶಾಕ್ ಕೊಟ್ಟಿದೆ …
ದಿಲ್ಲಿ ಬುಲಾವ್ ವದಂತಿಗಳ ನಡುವೆಯೇ ಯತೀಂದ್ರ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೆ ನೀಡಿದ್ದು, “ಐದು ವರ್ಷ ಸಿದ್ದರಾಮಯ್ಯ ಸಿಎಂ” ಎಂಬ ಸಂದೇಶವನ್ನು ಮತ್ತೊಮ್ಮೆ ಗಟ್ಟಿಯಾಗಿ ಸಾರಿದ್ದಾರೆ.
ಈ ಹೇಳಿಕೆಗಳಿಂದ ಡಿಕೆ ಬಣ ಮೊದಲಿನಿಂದಲೇ ಗರಂ ಆಗಿದ್ದು, ಯತೀಂದ್ರ ಅವರು ಈ ರೀತಿಯ ಓಪನ್ ಸ್ಟೇಟ್ಮೆಂಟ್ ಕೊಡಬಾರದು ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. ಆದರೆ ಇದಕ್ಕೂ ಡೋಂಟ್ ಕೇರ್ ಎನ್ನುವ ರೀತಿಯಲ್ಲಿ ಸಿಎಂ ಪರವಾಗಿ ಯತೀಂದ್ರ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಒಟ್ಟಾರೆ, ರಾಜ್ಯ ಕಾಂಗ್ರೆಸ್ ಒಳಗಿನ ಅಧಿಕಾರದ ಸಮರ ಮತ್ತಷ್ಟು ತೀವ್ರವಾಗುತ್ತಿದ್ದು, ಸಿಎಂ ಪುತ್ರನ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
