
ಬೆಂಗಳೂರು: ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನದಲ್ಲಿ ತೊಡಗಿದ್ದ ಮಂಡ್ಯ ಮತ್ತು ಮೈಸೂರು ಮೂಲದ ಖದರ್ನಾಕ್ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ರವಿ (ಪ್ರವೀಣ್) ಮತ್ತು ಅರುಣ್, ಯೂಟ್ಯೂಬ್ನಲ್ಲಿ ಶಾರ್ಟ್ ಸಿನಿಮಾಗಳನ್ನು ಮಾಡುತ್ತಿದ್ದ ಆನಂದ್ ರವಿ, ಆನ್ಲೈನ್ ರಮ್ಮಿ ಚಟದಿಂದ ಹಣ ಕಳೆದುಕೊಂಡು, ಮನೆ ಕಳ್ಳತನಕ್ಕೆ ಇಳಿದಿದ್ದರು.
ಆನ್ಲೈನ್ ರಮ್ಮಿ ಗೇಮ್ನಲ್ಲಿ ಹಣ ಕಳೆದುಕೊಂಡಿದ್ದ ರವಿ, ಹಣದ ಅವಶ್ಯಕತೆಯಿಂದ ಸ್ನೇಹಿತ ಅರುಣ್ ಜೊತೆಗೆ ಮೈಸೂರಿನಲ್ಲಿ ಮೂರ್ನಾಲ್ಕು ಮನೆ ಕಳ್ಳತನ ಮಾಡಿದ್ದಾರೆ. ಆದರೆ ಪೊಲೀಸರ ಕೈಗೆ ಸಿಕ್ಕಿಲ್ಲ. ಕೊನೆಗೂ ಬೆಂಗಳೂರು ಹನುಮಂತನಗರದ ಆರ್ಬಿಐ ನಿವೃತ್ತ ಅಧಿಕಾರಿಯಾಗಿರುವ ವಿರೇಂದ್ರ ಅವರ ಮನೆಯಲ್ಲಿ ಕಳ್ಳತನಕ್ಕೆ ಇಳಿದು, ಸಿಸಿಟಿವಿ ಆಧಾರದ ಮೇಲೆ ಬಂಧಿತರಾಗಿದ್ದಾರೆ.
ಕಳ್ಳತನ ಮಾಡಿದ್ದ ವೇಳೆ ವಿರೇಂದ್ರ ಅವರ ತಾಯಿ ಸ್ನಾನಕ್ಕೆ ಹೋದಾಗ ಮನೆ ಬಾಗಿಲು ಮುಚ್ಚದೇ ಹೋಗಿದ್ದು, ಕಳ್ಳರು 10 ನಿಮಿಷದಲ್ಲಿ ಕಳ್ಳತನ ಮುಗಿಸಿ 480 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದರು.
ಕಳ್ಳತನಕ್ಕಾಗಿ ಸಿಬಿಆರ್ ಬೈಕ್ ಖರೀದಿಸಿದ್ದ ರವಿ ಯೂಟ್ಯೂಬ್ ಶಾರ್ಟ್ ಸಿನಿಮಾಗಳಲ್ಲೂ ಖ್ಯಾತಿ ಪಡೆದಿದ್ದ, ಆದರೆ ಆನ್ಲೈನ್ ರಮ್ಮಿಯ ಚಟಕ್ಕಾಗಿ ಕಳ್ಳತನಕ್ಕೆ ಇಳಿದಿದ್ದನು. 31 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.