Ashwaveega News 24×7 ಮಾರ್ಚ್ 08 – 2026 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಯುವನಿಧಿ ಸ್ಕೀಮ್ ಕುರಿತಾಗಿ ಇದೀಗ ಹಲವು ಪ್ರಶ್ನೆಗಳು ಎದ್ದಿವೆ. ಸರ್ಕಾರ ನೀಡಿರುವ ಅಂಕಿಅಂಶಗಳಲ್ಲೇ ದೊಡ್ಡ ವ್ಯತ್ಯಾಸ ಕಂಡುಬಂದಿರುವುದರಿಂದ ಯೋಜನೆ ಕುರಿತ ಅನುಮಾನಗಳು ಹೆಚ್ಚಾಗಿವೆ.
ಯುವನಿಧಿ ಯೋಜನೆಯಿಂದ 3 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಫಲಾನುಭವಿಗಳಾಗಿದ್ದಾರೆ. ಎರಡು ವರ್ಷಗಳಿಂದ ಯೋಜನೆಗೆ ಹಣ ನೀಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ D. K. Shivakumar ತಿಳಿಸಿದ್ದಾರೆ .
ಆದರೆ ಅಂಕಿ ಅಂಶಗಳನ್ನು ಲೆಕ್ಕ ಹಾಕಿದರೆ ಮತ್ತೊಂದು ಚಿತ್ರ ಎದುರಾಗುತ್ತಿದೆ. ಸರ್ಕಾರ ಹೇಳುವಂತೆ 3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 24 ತಿಂಗಳು ಯುವನಿಧಿ ಹಣ ನೀಡಿದ್ದರೆ, ಒಟ್ಟು ವೆಚ್ಚ 2000 ಕೋಟಿಗೂ ಹೆಚ್ಚು ಆಗಬೇಕಿತ್ತು. ಆದರೆ ಸರ್ಕಾರದ ದಾಖಲೆಗಳ ಪ್ರಕಾರ ಇದುವರೆಗೆ ಕೇವಲ 913 ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿದೆ.
ಈ ಅಂಕಿಅಂಶಗಳ ನಡುವಿನ ವ್ಯತ್ಯಾಸವೇ ಈಗ ಪ್ರಶ್ನೆಗಳಿಗೆ ಕಾರಣವಾಗಿದೆ . ನಿಜಕ್ಕೂ ಯುವನಿಧಿ ಯೋಜನೆಯಿಂದ ನಿರುದ್ಯೋಗಿಗಳಿಗೆ ಎಷ್ಟು ಪ್ರಯೋಜನವಾಗಿದೆ ಎಂಬುದು ಚರ್ಚೆಯ ವಿಷಯವಾಗಿದೆ.
ಇನ್ನೊಂದೆಡೆ ಪಂಚ ಗ್ಯಾರಂಟಿ ಯೋಜನೆಗಳ ಭಾರದಿಂದ ಯುವನಿಧಿ ಯೋಜನೆಗೆ ಬ್ರೇಕ್ ಬಿದ್ದಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಈ ಬಾರಿ ಬಜೆಟ್ನಲ್ಲಿ ಯುವನಿಧಿಗೆ ಹಣ ಮೀಸಲಿಡದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ .
ಯುವನಿಧಿ ಯೋಜನೆ ಮೇಲೆ ನಂಬಿಕೆ ಇಟ್ಟಿರುವ ಸಾವಿರಾರು ನಿರುದ್ಯೋಗಿ ಯುವಕರ ಭವಿಷ್ಯ ಏನಾಗಲಿದೆ ? ಈ ಎಲ್ಲಾ ಪ್ರಶ್ನೆಗಳಿಗೆ ಯುವ ಸಬಲೀಕರಣ ಸಚಿವರು ಉತ್ತರ ನೀಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ .
