
ಕೋಲಾರದ ಎಸ್.ಎನ್. ಆರ್ ಜಿಲ್ಲಾಸ್ಪತ್ರೆಯಲ್ಲಿ ಕಳ್ಳ ತನ್ನ ಕೈಚಳಕವನ್ನು ತೋರಿಸಿದ್ದಾನೆ. ಆ ಕಳ್ಳ ರೋಗಿಗಳ ಮೊಬೈಲ್ಗಳನ್ನು ಕದ್ದು ಪರಾರಿಯಾಗುತ್ತಿದ್ದಾನೆ. ಕಳೆದ ಒಂದು ವಾರದಿಂದ ಆರು ಮೊಬೈಲ್ಗಳು ಈ ಜಿಲ್ಲಾಸ್ಪತ್ರೆಯಲ್ಲಿ ಕಳ್ಳತನವಾಗಿದೆ. ಕಳ್ಳತನದಿಂದ ಬೇಸತ್ತ ರೋಗಿಗಳು ಆ ಕಳ್ಳನನ್ನು ಹಿಡಿಯಲು ರೋಗಿಗಳು ಆಸ್ಪತ್ರೆಯ ಸಿಬ್ಬಂದಿಗಳಿಗೆ ಒತ್ತಾಯಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಸಿಸಿಟಿವಿಯನ್ನು ಪರಿಶೀಲಿಸಿ ಕಳ್ಳನ ಕರಾಮತ್ತನ್ನು ಸರೆಹಿಡಿದಿದ್ದಾರೆ. ಈ ಘಟನೆಯನ್ನು ಕುರಿತು ಆಸ್ಪತ್ರೆಯವರು ಮತ್ತು ರೋಗಿಗಳು ಕೋಲಾರದ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.