ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದಿಂದ ಹಿಡಿದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಒಬ್ಬ ಸಂಸದರಾಗಿ ಈ ರೀತಿಯ ಕೃತ್ಯ ಮಾಡ್ತಾರೆ ಅಂದ್ರೆ ಬಹುಶಃ ಯಾರೂ ನಂಬಲ್ಲ. ಯಾಕಂದ್ರೆ ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಈ ರೀತಿ ತಲೆ ತಗ್ಗಿಸುವ ಕಾರ್ಯವನ್ನು ಮಾಡ್ತಾರೆ ಅಂದ್ರೆ ನಿಜಕ್ಕೂ ವಿಪರ್ಯಾಸವೇ ಸರಿ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಿಡ್ನ್ಯಾಪ್ ಕೇಸ್ ಮೇಲೆ ಹೆಚ್.ಡಿ ರೇವಣ್ಣರನ್ನ ಎಸ್ಐಟಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ತೆಗೆದುಕೊಂಡು ತನಿಖೆ ಮಾಡಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ತದನಂತರ ಬೇಲ್ ಮೇಲೆ ಹೊರಬಂದ ರೇವಣ್ಣರಿಗೆ ಸದ್ಯಕ್ಕೆ ಬೇಲ್ ಅಷ್ಟೇ ಸಿಕ್ಕದೆಯೇ ಹೊರತು ಕಂಪ್ಲೀಟಾಗಿ ಈ ಪ್ರಕರಣದಿಂದ ಮುಕ್ತಿ ಸಿಕ್ಕಿಲ್ಲ.
ಇನ್ನೂ ಈ ಪ್ರಕರಣದಲ್ಲಿ ಭವಾನಿ ರೇವಣ್ಣರದ್ದು ಕೂಡ ಕೈವಾಡವಿದೆ ಅನ್ನೋ ಆರೋಪವಿದೆ. ಹಾಗಾಗಿ ಎಸ್ಐಟಿ ಅಧಿಕಾರಿಗಳು ನೋಟೀಸನ್ನ ನೀಡಿದ್ದು, ಇದೀಗ ತನಿಖೆಯನ್ನು ಸಹ ನಡೆಸುತ್ತಿದ್ದಾರೆ. ಪ್ರಮುಖವಾಗಿ ಇದಕ್ಕೆಲ್ಲ ಮುಖ್ಯ ಕಾರಣರಾದಂತಹ ಪ್ರಜ್ವಲ್ ರೇವಣ್ಣ ನಿನ್ನೆ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು. ಇದೀಗ ಎಸ್ಐಟಿ ಅಧಿಕಾರಿಗಳು ಅವರನ್ನ ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಈ ಪ್ರಕರಣ ಕೇಸ್ ಇಷ್ಟು ದಿನ ಒಂದೊಂದು ರೂಪವನ್ನು ತಾಳಿ ರಾಜ್ಯದ ಜನರ ತಲೆ ಕೆಡಿಸಿದ್ದು, ಯಾವಾಗಪ್ಪ ಪ್ರಜ್ವಲ್ ವಿದೇಶದಿಂದ ನಮ್ಮ ಬೆಂಗಳೂರಿಗೆ ಬರ್ತಾರೆ ಅಂತ ರಾಜ್ಯದ ಜನರು ತಲೆಕೆಡಿಸಿಕೊಂಡಿದ್ರು. ಮುಂದೆ ಈ ಪ್ರಕರಣ ಯಾವ ಸ್ವರೂಪವನ್ನು ಪಡೆಯುತ್ತೆ, ಏನಾಗಬಹುದು ಒಂದು ವೇಳೆ ಇದೆಲ್ಲವೂ ನಿಜ ಅಂತಾದ್ರೆ, ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಅರೆಸ್ಟ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಈ ಕೇಸ್ ಯಾವೆಲ್ಲಾ ತಿರುವನ್ನ ಪಡೆಯುತ್ತೆ..? ಈ ಪೆನ್ಡ್ರೈವ್ ಕೇಸ್ಗೆ ಸಂಬಂಧಿಸಿದಂತೆ ಪ್ರಜ್ವಲ್, ಹೆಚ್.ಡಿ ರೇವಣ್ಣ ಹಾಗೆಯೇ ಭವಾನಿ ರೇವಣ್ಣ ಅರೆಸ್ಟ್ ಆಗ್ತಾರಾ..? ಇಲ್ವಾ ಅನ್ನೋದು ಇಂದು ನಿರ್ಧಾರವಾಗಲಿದೆ.