ದಾವಣಗೆರೆ:
ನಗರದ ನಿಟವಳ್ಳಿ ರಸ್ತೆಯ ಕೆಟಿಜೆ ನಗರದಲ್ಲಿರುವ ಪ್ರಕಾಶ್ ಬಾರ್ನಲ್ಲಿ ಭೀಕರ ಕೊಲೆ ಸಂಭವಿಸಿದ್ದು, ಕುಮಾರ್ (36) ಎಂಬ ವ್ಯಕ್ತಿಗೆ ಚಾಕು ಇರಿತದಿಂದ ಹತ್ಯೆ ನಡೆದಿದೆ.
ಪ್ರಕಾಶ್ ಬಾರ್ನಲ್ಲಿ ಸ್ನೇಹಿತರ ಜೊತೆ ಕುಳಿತಿದ್ದ ಕುಮಾರ್ ಮೇಲೆ, ಹಿಂದಿನಿಂದ ಬಂದ ಗೌತಮ್ ಎಂಬಾತನು ಚಾಕು ಇರಿಸಿ ಕೊಲೆ ಮಾಡಿದ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಕುಮಾರ್ ಚಾಕು ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದ ದೃಶ್ಯ ಕಂಡುಬಂದಿದ್ದು, ತಕ್ಷಣ ಕೆಟಿಜೆ ನಗರ ಪೊಲೀಸ್ ಸ್ಥಳಕ್ಕೆ ಆಗಮಿಸಿದರು. ಗಾಯಗೊಂಡ ಕುಮಾರ್ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ, ವಾಹನದಲ್ಲೇ ಸಾವನ್ನಪ್ಪಿದ್ದಾರೆ.
ಕೊಲೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.