ಹುಬ್ಬಳ್ಳಿ: ನೇಹಾ ಹತ್ಯೆ ಮಾಸುವ ಮುನ್ನವೆ, ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಮತ್ತೊಂದು ನೆತ್ತರು ಹರಿದಿದೆ.
ಹೌದು,,,, ಹುಬ್ಬಳ್ಳಿಯ ವೀರಾಪುರ ಓಣಿಯ ದೇವಿಗುಡಿ ನಿವಾಸಿ ಅಂಜಲಿ (20) ಎಂಬಾಕೆಯೇ ಸಾವನ್ನಪ್ಪಿದ ಯುವತಿಯಾಗಿದ್ದು, ಈಕೆಗೆ ಅದೇ ಏರಿಯಾದ ವಿಶ್ವ ಅಲಿಯಾಸ್ ಗಿರೀಶ್ ಸಾವಂತ (21) ಎಂಬಾತ ಚಾಕುವಿನಿಂದ ಚುಚ್ಚಿ ಕೊಲೆಮಾಡಿದ್ದಾನೆಂದು ತಿಳಿದುಬಂದಿದೆ.
ವಿಶ್ವ ಎಂಬ ಪಾಗಲ್ ಪ್ರೇಮಿ ಕಳೆದ ಹಲವಾರು ದಿನಗಳಿಂದ ಅಂಜಲಿಗೆ ಪ್ರೀತಿಸು ಎಂದು ಪೀಡಿಸುತ್ತಿದ್ದನಂತೆ, ಆದ್ರೆ ಅಂಜಲಿ ಪ್ರೀತಿ ನಿರಾಕರಿಸಿದಕ್ಕೆ ಇಂದು ಬೆಳಂಬೆಳ್ಳಗ್ಗೆ ಅಂಜಲಿ ನಿವಾಸಕ್ಕೆ ತೆರಳಿ, ಮನೆಯ ಕದ ಬಡದಿದ್ದಾನೆ, ಬಾಗಿಲು ತೆಗೆದ ಅಂಜಲಿಗೆ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ವಿಷಯ ತಿಳಿದು ಸ್ಥಳಕ್ಕೆ ಘಂಟಿಕೇರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.