
ಗುಬ್ಬಿಯ ಡಿ.ರಾಂಪುರದಲ್ಲಿ ಮೇ.16ರಂದು ಬೃಹತ್ ಪ್ರತಿಭಟನೆ
ತುಮಕೂರು : ರಕ್ತವನ್ನಾದರೂ ಕೊಟ್ಟು ಹೇಮಾವತಿ ನೀರನ್ನು ಉಳಿಸಿಕೊಳ್ಳುತ್ತೇವೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ತಿಳಿಸಿದರು.
ತುಮಕೂರಿನ ಉಡುಪಿ ಗ್ರಾಂಡ್ ಹೋಟಲ್ ನಲ್ಲಿ ಮಾಜಿ ಸಚಿವ ಶ್ರೀ ಸೊಗಡು ಶಿವಣ್ಣನವರ ನೇತ್ರತ್ವ ಸಭೆಯಲ್ಲಿ ಅವರು ಮಾತನಾಡಿದ ಅವರು

ಗುಬ್ಬಿ ತಾಲೂಕಿನ 70 ನೇ ಕಿಲೋ ಮೀಟರ್ ನ ಡಿ. ರಾಂಪುರದ ಬಳಿ ಎಕ್ಸ್ ಪ್ರೆಸ್ ಪೈಪ್ ಲೈನ್ ಕೆನಾಲ್ ಕಾಮಗಾರಿ ಕುರಿತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರಿನಲ್ಲಿ ಒಂದು ತೊಟ್ಟು ಹನಿ ನೀರನ್ನು ಕೂಡಲು ಸಾಧ್ಯವಿಲ್ಲ ರಾಮನಗರ ಜಿಲ್ಲೆಗೆ ನೀರು ಹರಿಸಲು ಬಿಡುವುದಿಲ್ಲ ಇದು ಸಾಧ್ಯವಿಲ್ಲ ಎಂದರು.
ರಾಮನಗರ ಜಿಲ್ಲೆಯ ಹಿತಾಸಕ್ತಿ ಇದ್ದರೆ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಂಡು ಪ್ರಸ್ತುತ ಇರುವ ನಾಲೆಯಲ್ಲಿ ತೆಗೆದುಕೊಂಡು ಹೋಗಲಿ ಇದಕ್ಕೆ ನಮ್ಮ ವಿರೋಧವಿಲ್ಲ.
ಆದರೆ ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿ ಒಂದು ತೊಟ್ಟು ಹನಿಯನ್ನು ಕೂಡ ನೀಡಲು ನಾವು ಸಿದ್ಧವಿಲ್ಲ ಎಂದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ರೈತ ಮುಖಂಡರುಗಳ ಮೇ.16ರಂದು ಗುಬ್ಬಿಯ ಡಿ.ರಾಂಪುರ ಬಳಿ ಬೃಹತ್ ಹೋರಾಟ ಹಮ್ಮಿಕೊಳಲಾಗಿದೆ ಎಂದರು.
ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಪೈಪ್ ಲೈನ್ ಕೆನಾಲ್ ಮೂಲಕ ನೀರನ್ನು ತೆಗೆದು ಕೊಂಡು ಹೋಗಲು ಒಂದು ಅಡಿ ಜಾಗವನ್ನು ಬಿಡುವುದಿಲ್ಲ
ಈ ಯೋಜನೆ ಜಾರಿಯಾದರೆ ಗುಬ್ಬಿ, ತುರುವೇಕೆರೆ, ತುಮಕೂರು,ತಿಪಟೂರು,ಈ ಭಾಗದ ರೈತರಿಗೆ ಹೇಮಾವತಿ ನೀರು ಮರಿಚಿಕೆಯಾಗಲಿದೆ.

ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ಇದೆ 16 ನೇ ತಾರೀಖು ಕರೆ ಕೊಟ್ಟಿರುವ ಪ್ರತಿಭಟನೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ರೈತಾಪಿ ಜನರು ಭಾಗವಹಿಸಿ ಹೋರಾಟ ನೆಡಸುವಂತೆ
ಯೋಜನೆ ಜಾರಿಗಾಗಿ ಈಗಾಗಲೇ ಹತ್ತಾರು ಕಿಲೋಮೀಟರ್ ಕಾಮಗಾರಿ ನಡೆದಿದ್ದು ರೈತರ ಹಿಡುವಳಿ ಜಮೀನುಗಳಲ್ಲಿರುವ ಅಡಿಕೆ ತೆಂಗು ಮಾವು ಇತರ ಬೆಳೆಗಳನ್ನು ನೋಡದೆ ಮಣ್ಣನ್ನು ಅಗೆದು ಹಾಕಿದ್ದು ರೈತರಿಗೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಇದ್ಯಾವುದನ್ನು ಲೆಕ್ಕಿಸದೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೆನಾಲ್ ಕಾಮಗಾರಿ ಪ್ರಾರಂಭಿಸಿದ್ದು ಅಕ್ಷಮ್ಯ ಅಪರಾಧ ಯಾವುದೇ ಕಾರಣಕ್ಕೂ ಕಾಮಾಗಾರಿ ಮಾಡಲು ಬಿಡುವುದಿಲ್ಲ ನಾವೇ ನಾಲೆಯನ್ನು ಮುಚ್ಚುತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ,ಸುರೇಶ್ ಗೌಡ , ಮಾಜಿ ಶಾಸಕರಾದ ಸೊಗಡು ಶಿವಣ್ಣ , ಹೆಚ್ ನಿಂಗಪ್ಪಮುಖಂಡರಾದ ಎಸ್.ಡಿ.ದೀಲೀಪ್ ಕುಮಾರ್ ,ಬಿ.ಎಸ್.ನಾಗರಾಜು ,ಶಾಂತಕುಮಾರ್ ಇದ್ದರು.