
xr:d:DAGAxHhy7ac:21,j:1555290857098384481,t:24032811
ಸೀಸನ್ 18ರ ಐಪಿಎಲ್ಗಾಗಿ ತುದಿಗಾಲಲ್ಲಿ ನಿಂತಿರುವ ಕ್ರಿಕೆಟ್ ಅಭಿಮಾನಿಗಳು ಟೂರ್ನಿ ಯಾವಾಗ ಶುರುವಾಗುತ್ತೆ ಎಂಬ ಹಂಬಲದಲ್ಲಿದ್ದಾರೆ. ಇತ್ತ ಕ್ರಿಕೆಟ್ ಆಟಗಾರರು ಕೂಡ ನಿಧಾನವಾಗಿ ಒಬ್ಬರಂತೆ ಒಬ್ಬರು ತಂಡವನ್ನು ಸೇರುತ್ತಿದ್ದಾರೆ. ಸೀಸನ್1ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದ ಪ್ರಧಾನ ಕೊಚ್ ಆಗಿರುವ ರಾಹುಲ್ ದ್ರಾವಿಡ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಮಾಹಿತಿಗಳ ಪ್ರಕಾರ ರಾಹುಲ್ ದ್ರಾವಿಡ್ ಇನ್ನೂ ಬೇಗನೇ ತಂಡವನ್ನು ಕೂಡಿಕೊಳ್ಳಬೇಕಿತ್ತು . ಆದರೆ ಬೆಂಗಳೂರಿನಲ್ಲಿ ತಮ್ಮ ಕಿರಿಯ ಪುತ್ರ ಅನ್ವಯ್ ಜೊತೆ ಕ್ಲಬ್ ಕ್ರಿಕೆಟ್ ಆಡುವಾಗ ಎಡಗಾಲಿನ ಗಾಯಕ್ಕೆ ಒಳಗಾಗಿದ್ದರು. ಆದಾದ ಬಳಿಕ ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡಿದ್ದರು. ಐಪಿಎಲ್ಗೆ ಕೆಲವೇ ದಿನಗಳು ಬಾಕಿ ಉಳಿದ ಹಿನ್ನಲೆ ರಾಹುಲ್ ದ್ರಾವಿಡ್ ತಂಡ ಸೇರಿ ಆಟಗಾರರ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ.

ಅಭಿಷೇಕ್.ಎಸ್