ರಾಗಿ ಹಾಲುಬಾಯಿ ಬೇಕಾಗುವ ಸಾಮಗ್ರಿಗಳು ಒಂದು ಲೋಟ ರಾಗಿ ಅರ್ಧ ಲೋಟ ಹಸಿ ತೆಂಗಿನ ಕಾಯಿ ತುರಿ ಒಂದು ಲೋಟ ಬೆಲ್ಲ ಏಲಕ್ಕಿ ಎರಡು ಚಮಚ ತುಪ್ಪ ಮಾಡುವ ವಿಧಾನ ಮೊದಲಿಗೆ ರಾಗಿಯನ್ನು ಚೆನ್ನಾಗಿ ತೊಳೆದು ಐದರಿಂದ ಆರು ಗಂಟೆಗಳ ಕಾಲ ನೆನೆಸಿಡಬೇಕು ನೆನೆಸಿದ ರಾಗಿಯನ್ನು ಮತ್ತು ತೆಂಗಿನಕಾಯಿ ತುರಿ ಏಲಕ್ಕಿ ಎಲ್ಲವನ್ನು ಸೇರಿಸಿ ಮಿಕ್ಸಿಗೆ ಹಾಕಿ ಅದನ್ನು ಸೋಸಿಕೊಂಡು ಹಾಲನ್ನು ತೆಗೆದುಕೊಳ್ಳಬೇಕು ಅದಕ್ಕೆ ಬೆಲ್ಲವನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು ಸೋಸಿದ ಹಾಲು, ಬೆಲ್ಲ ಎಲ್ಲಾ ಸೇರಿ ಐದರಿಂದ ಆರು ಲೋಟದವರೆಗೆ ಒದಗಿಸಿಕೊಂಡು ಬಾಣಲೆಯಲ್ಲಿ ಹಾಕಿ ಕೆದಕುತ್ತಿರಬೇಕು ತುಪ್ಪ ಹಾಕಿ ಕೆದಕಿದಾಗ ಅದು ಬಾಣಲೆಯನ್ನು ಬಿಡುವ ಹದಕ್ಕೆ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ 10 ನಿಮಿಷ ಬಿಟ್ಟು ಬೇಕಾದ ಆಕಾರಕ್ಕೆ ಕಟ್ ಮಾಡಿದರೆ ರಾಗಿ ಹಾಲುಬಾಯಿ ರೆಡಿ.
-ಬಿಂದು ಗುರು ಮಹೇಶ್…