
ಐಪಿಎಲ್ 2025ರ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಮಾರ್ಚ್ 22ರಿಂದ ಮೇ 25ರವರೆಗೆ ಐಪಿಎಲ್ ಕ್ರಿಕೆಟ್ ಹಬ್ಬ ನಡೆಯಲಿದೆ.ಮೊದಲ ಪಂದ್ಯದಲ್ಲೇ ಕೆಕೆಆರ್ ವಸರ್ಸ್ ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಾರ್ಚ್ 22ರಂದು ಕಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಸಂಜೆ 7;30ಕ್ಕೆ ನಡೆಯಲಿದೆ. ಕಳೆದ ಬಾರಿ ರನ್ನರ್ಅಪ್ ತಂಡ ಹೈದ್ರಬಾದ್ ಮಾರ್ಚ್ 23ರಂದು ಸೀಸನ್ 1ರ ಚಾಂಪಿಯನ್ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ದ ಆಡಲಿದೆ. ಮುಖ್ಯವಾಗಿ ಅಭಿಮಾನಿಗಳ ನೆಚ್ಚಿನ ಕ್ಲ್ಯಾಶ್ ಸಿಎಸ್ಕೆ ಹಾಗೂ ಮುಂಬೈ ತಂಡಗಳು ಮಾರ್ಚ್ 23ರಂದೇ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಆಡಲಿವೆ.

ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದ್ದು ಮೇ 18 ರಂದು ಕೊನೆ ಲೀಗ್ ಪಂದ್ಯ ಆಗಲಿದೆ. ಮೇ 20 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆದರೆ, ಮೇ 21 ಎಲಿಮಿನೇಟರ್ ಪಂದ್ಯ ಜರುಗಲಿದೆ. ಎಲಿಮಿನೇಟರ್ನಲ್ಲಿ ಗೆದ್ದ ತಂಡ ಮೇ 23 ರಂದು ಕ್ವಾಲಿಫೈಯರ್ 1ರಲ್ಲಿ ಸೋತ ತಂಡದ ವಿರುದ್ದ ಸೆಣಸಾಡಲಿದೆ. ಮೇ 25 ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು 2025ರ ಐಪಿಎಲ್ ವಿನ್ನರ್ ಯಾರೆಂಬುದು ಗೊತ್ತಾಗಲಿದೆ.
ಅಭಿಷೇಕ್ ಎಸ್