
ಐಪಿಎಲ್ ಸೀಸನ್ 18ರ ಟೂರ್ನಿಗೆ ಆರ್ಸಿಬಿ ತನ್ನ ನೂತನ ನಾಯಕನನ್ನು ಘೋಷಿಸಿದೆ. ಅದರಂತೆ ರಜತ್ ಪಾಟಿದರ್ ಈ ಬಾರಿ ಬೆಂಗಳೂರು ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ. ಈ ಬಾರಿ ಐಪಿಎಲ್ ಮೆಗಾ ಹರಾಜಿನ ಬಳಿಕ ಎಲ್ಲರೂ ವಿರಾಟ್ ಕೊಹ್ಲಿಯೇ ನಾಯಕರಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.

31 ವರ್ಷದ ಬಲಗೈ ಬ್ಯಾಟ್ಸಮನ್ಗೆ ನಾಯಕನ ಪಟ್ಟ ಕೊಡಲಾಗಿದೆ. ಅಷ್ಟಕ್ಕೂ ರಜತ್ ಪಾಟಿದಾರ್ಗೆ ನಾಯಕ ಸ್ಥಾನ ಕೊಟ್ಟಿರುವುದಕ್ಕೆ ಅಸಲಿ ಕಾರಣ ಏನೆಂಬುದನ್ನು ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹಾಗೂ ಆರ್ಸಿಬಿ ವ್ಯವಹಾರಗಳ ನಿರ್ದೇಶಕ ಮೊ ಬೊಬಾಟ್ ನಾಯಕ ಆಯ್ಕೆ ಬಗ್ಗೆ ಮಾತನಾಡಿದ್ದಾರೆ. ಅವರ ಪ್ರಕಾರ ಕಳೆದ ವರ್ಷವೇ ರಜತ್ ಬಳಿ ಆರ್ಸಿಬಿ ನಾಯಕನ್ನಾಗುವ ಬಗ್ಗೆ ಚರ್ಚೆ ಮಾಡಲಾಗಿತ್ತಂತೆ ಫಾಪ್ ಡು ಫ್ಲೆಸಿಸ್ ಕೈ ಬಿಡಲು ಇದೇ ಕಾರಣ ಎಂದು ಹೇಳಿದ ಮೊ ಬೊಬಾಟ್ ರಜತ್ಪಾಟಿದಾರ್ ಅವರಲ್ಲಿ ನಾಯಕನ ಗುಣಗಳಿವೆ. ಒತ್ತಡ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ, ಇತರ ಆಟಗಾರರ ಅಭಿಪ್ರಾಯಕ್ಕೆ ಮಹತ್ವ ನೀಡುತ್ತಾರೆ. ಕೊಹ್ಲಿಗೆ ನಾಯಕ ಸ್ಥಾನದ ಅಗತ್ಯವಿಲ್ಲ ಯಾಕೆಂದರೆ ಅವರು ಯಾವಾಗಲೂ ಲೀಡರ್, ತಂಡವನ್ನು ಸದಾ ಕಾಲ ಮುನ್ನೆಡಸುತ್ತಾರೆ, ಈ ಹಿಂದೆ ಫಾಪ್ ನಾಯಕರಾದಾಗ ಎಲ್ಲ ರೀತಿಯ ಸಹಕಾರ ನೀಡಿದ್ದರು. ಅದೇ ರೀತಿ ರಜತ್ ಪಾಟಿದಾರ್ಗೂ ಸಹಕಾರ ಕೊಟ್ಟು ತಂಡವನ್ನು ಮುನ್ನೆಡುಸುತ್ತಾರೆ ಎಂದು ಮೊ ಬೊಬಾಟ್ ಹೇಳಿದ್ದಾರೆ.
ಅಭಿಷೇಕ್ ಎಸ್