ಬೆಂಗಳೂರು: ಗೌರಿ ಗಣೇಶ್ ಹಬ್ಬದ ಪ್ರಯುಕ್ತ ಊರಿಗೆ ತೆರಳುವವರಿಗೆ ಗುಡ್ ನ್ಯೂಸ್ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವಿಶೇಷ ಬಸ್ ಸೇವೆಯನ್ನು ಕಲ್ಪಿಸಿದೆ.
ಸೆಪ್ಟೆಂಬರ್ 5ರಿಂದ ಸೆಪ್ಟೆಂಬರ್ 7ರವರೆಗೆ 1500 ಕ್ಕೂ ಹೆಚ್ಚು ವಿಶೇಷ ಬಸ್ಗಳನ್ನು ಓಡಿಸಲು KSRTC ನಿರ್ಧಾರ ಮಾಡಿದ್ದು, ಬೆಂಗಳೂರಿನಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ನೀಡಲಿದೆ. ಹಬ್ಬದ ಸಮಯದಲ್ಲಿ ಊರಿಗೆ ತೆರಳುವವರ ಸಂಖ್ಯೆಯ ಹೆಚ್ಚಳವನ್ನು ಗಮನದಲ್ಲಿಟ್ಟು ಈ ವಿಶೇಷ ಕ್ರಮವನ್ನು ಕೈಗೊಳ್ಳಲಾಗಿದೆ.
KSRTC, ಪ್ರಯಾಣಿಕರ ಅನುಗುಣವಾಗಿ ಐರಾವತ, ರಾಜಹಂಸ, ಇ.ವಿ ಪವರ್ ಪ್ಲಸ್, ಅಂಬಾರಿ, ಅಶ್ವಮೇಧ, ಪಲ್ಲಕ್ಕಿ ಸೇರಿದಂತೆ ಹೈಟೆಕ್ ಬಸ್ಗಳನ್ನೂ ಸಹ ಓಡಿಸಲು ಸಿದ್ಧತೆ ಮಾಡಿದೆ. ಬಸ್ಗಳ ಕಾರ್ಯಾಚರಣೆಗಳು ಕೆಂಪೇಗೌಡ ಬಸ್ ನಿಲ್ದಾಣ, ಸ್ಯಾಟೆಲೈಟ್ ಬಸ್ ನಿಲ್ದಾಣ, ಮತ್ತು ಶಾಂತಿ ನಗರ ಬಸ್ ನಿಲ್ದಾಣಗಳಿಂದ ಕಾರ್ಯನಿರ್ವಹಿಸಲಿದ್ದು, ಇವು ರಾಜ್ಯದ ಹಲವು ಜಿಲ್ಲೆಗಳಿಗೆ ಸಂಚಾರ ಮಾಡಲಿದೆ.
ಪ್ರಯಾಣಿಕರ ಬೇಡಿಕೆಯ ಮೇರೆಗೆ ಅಗತ್ಯವಿದ್ದರೆ ಹೆಚ್ಚುವರಿ ಬಸ್ಗಳನ್ನು ಕೂಡ ಓಡಿಸಲು KSRTC ನಿರ್ಧಾರ ಕೈಗೊಂಡಿದೆ.