ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಜ್ವರದ ಆತಂಕ ಹೆಚ್ಚಾಗುತ್ತಿದ್ದು, ಇಲ್ಲಿಯವರೆಗೆ 25261 ಡೆಂಘೀ ಪ್ರಕರಣಗಳು ವರದಿಯಾಗಿವೆ. ಸದ್ಯ 1569 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದು, ಡೆಂಘೀ ಜ್ವರಕ್ಕೆ 12 ಮಂದಿ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 147 ಹೊಸ ಡೆಂಘೀ ಪ್ರಕರಣಗಳು ದೃಢಪಡಿಸಲಾಗಿದ್ದು, ಇದರಲ್ಲಿ ಒಂದು ವರ್ಷದೊಳಗಿನ 5 ಮಕ್ಕಳು ಸೇರಿದ್ದಾರೆ. ಈ ಮೂಲಕ, ಈ ವಯೋಮಾನದೊಳಗಿನ 511 ಮಕ್ಕಳಲ್ಲಿ ಡೆಂಘೀ ದೃಢವಾಗಿದೆ.
ಇದೇ ಅವಧಿಯಲ್ಲಿ, ಒಂದು ವರ್ಷದಿಂದ 18 ವರ್ಷದೊಳಗಿನ 35 ಮಂದಿಗೆ ಡೆಂಘೀ ಸೋಂಕು ತಗುಲಿದೆ, ಇದರಿಂದಾಗಿ ಈ ವಯೋಮಾನದ ಮಕ್ಕಳಲ್ಲಿ ಇದುವರೆಗೆ 9055 ಪ್ರಕರಣಗಳು ದೃಢಗೊಂಡಿವೆ.
18 ವರ್ಷ ಮೇಲ್ಪಟ್ಟ 107 ಮಂದಿಯಲ್ಲಿ ಕಳೆದ 24 ಗಂಟೆಗಳಲ್ಲಿ ಡೆಂಘೀ ಪತ್ತೆಯಾಗಿದ್ದು, ಈ ವಯೋಮಾನದ 15842 ಮಂದಿಯಲ್ಲಿ ಡೆಂಘೀ ದೃಢವಾಗಿದೆ.