ಹೊಸಕೋಟೆ:
ಬೆಳ್ಳಂಬೆಳಗ್ಗೆ ಹೃದಯ ವಿದ್ರಾವಕ ಘಟನೆಯು ಬೆಂಗಳೂರಿನ ಹೊರವಲಯ ಹೊಸಕೋಟೆಯಲ್ಲಿ ನಡೆದಿದೆ. ಹೊಸಕೋಟೆ ನಗರಸಭೆ ಮುಂಭಾಗದ ವಾಣಿಜ್ಯ ಅಂಗಡಿಗಳ ಮುಂದೆ ಮಲಗಿದ್ದ ಭಿಕ್ಷುಕನನ್ನು ದುಷ್ಕರ್ಮಿಗಳು ಸಿಮೆಂಟ್ ಕಾಂಕ್ರೀಟ್ ಬ್ಲಾಕ್ನಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ.
ಈ ಕೋಲಾಹಲಕಾರಿ ಘಟನೆ ಹೊಸಕೋಟೆಯ ಹಳೇ ಬಸ್ ನಿಲ್ದಾಣದ ಸಮೀಪದ ಪ್ರದೇಶದಲ್ಲಿ ನಡೆದಿದೆ. ಕೊಲೆಯ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿ ರಸ್ತೆಯಲ್ಲಿ ಪೇಪರ್ ಆಗುತಾ ಮತ್ತು ಬಿಚ್ಚಾಟನೆ ನಡೆಸುತ್ತಿದ್ದ ವ್ಯಕ್ತಿಯೆಂದು ಹೇಳಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಡಿವೈಎಸ್ಪಿ ಶಂಕರ್ ಗೌಡ ಅಣ್ಣ ಸಾಹೇಬ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.
ಪೊಲೀಸರು ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸುತ್ತಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.