ಧಾರವಾಡ : ಜಿಲ್ಲೆಯಲ್ಲಿ ಸುರಿದ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಭಾರಿ ಮಳೆಗೆ ಸೇತುವೆಗಳು ಕೊಚ್ಚಿಹೋಗಿವೆ.ಕೊಚ್ಚಿಹೋದ ಸೇತುವೆಯನ್ನ ಹಗ್ಗದ ಸಹಾಯದಿಂದ ಗ್ರಾಮಸ್ಥರು ದಾಟುತ್ತಿದ್ದು, ಪ್ರಾಣದ ಹಂಗನ್ನು ಸಹ ಗ್ರಾಮಸ್ಥರು ತೊರೆದಿದ್ದಾರೆ.
ಇನ್ನೂ ಧಾರವಾಡ ಜಿಲ್ಲೆಯ ಆಳ್ನಾವರ ತಾಲೂಕಿನ ಬೆಣಚಿ ಮತ್ತು ಬಾಲಗೇರಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಭಾರಿ ಮಳೆ ಆಗುತಿದ್ದು, ಆಳ್ನಾವರ ತಾಲೂಕಿನ ಬೆಣಚಿ ಮತ್ತು ಬಾಲಗೇರಿ ಗ್ರಾಮದ ಮದ್ಯ ಇರುವ ಸೇತುವೆ ಮುರಿದು ಬಿದಿದೆ. ಸದ್ಯ ಸೇತುವೆ ಕೊಚ್ಚಿಹೋಗಿರೋದರಿಂದ ಬೆಣಚಿ ಮತ್ತು ಬಾಲಗೇರಿ ಗ್ರಾಮದ ಸೇತುವೆ ನೀರನಿ ರಭಸಕ್ಕೆ ಕೊಚ್ಚಿ ಹೋಗಿರುವ ಕಾರಣ, ಎರಡು ಗ್ರಾಮಗಳ ನಡುವಿನ ಸಂಪರ್ಕ ಸ್ಥಗಿತವಾಗಿದೆ.
ಅಷ್ಟೆ ಅಲ್ಲಾದೆ ಕಳೆದ 2019 ರ ಪ್ರವಾಹದಲ್ಲಿ ಅರ್ದ ಸೇತುವೆ ಕೊಚ್ಚಿ ಹೋಗಿದ್ದು, ಕಳೆದ 4 ದಿನಗಳಿಂದ ಸುರಿದ ಮಳೆಗೆ ಸೇತುವೆ ಪೂರ್ತಿಯಾಗಿ ಕೊಚ್ಚಿಹೋಗಿದ್ದೆ. ಸದ್ಯ ಗ್ರಾಮಕ್ಕೆ ಹೋಗಲು ಪರ್ಯಾಯ ಮಾರ್ಗವಿಲ್ಲದ ಹಗ್ಗದ ಸಹಾಯದಿಂದ ದಾಟುತ್ತಿದ್ದು, ಸೇತುವೆ ಪುನರ್ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮಸ್ಥರು ಸಚಿವ ಸಂತೋಷ ಲಾಡ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : https://ashwaveega.com/sanjay-dutt-visits-kateelu-durgaparameshwari-temple/