ಶಿವಮೊಗ್ಗ : ನಿನ್ನೆ ರಾತ್ರಿಯಿಂದ ಭಾರಿ ಮಳೆ ಸುರಿಯುತ್ತಿದ್ದು,ಕೋಳಿ ಫಾರಂಗೆ ನೀರು ನುಗ್ಗಿದೆ.
ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈದೊಟ್ಲು ಗ್ರಾಮದಲ್ಲಿ ನಿನ್ನೆ ರಾತ್ರಿಯಿಂದ ಮಳೆ ಸುರಿಯುತ್ತಿದ್ದು, ಕೋಳಿ ಫಾರಂಗೆ ನೀರು ನುಗ್ಗಿ 3000 ಕೋಳಿ ಮರಿಗಳು ಮುಳುಗಿ ಸಾವನ್ನಪ್ಪಿದೆ. ಈ ಘಟನೆಯಿಂದ ಫಾರಂ ನಿರ್ಮಿಸಿದ ಚಂದ್ರೇಗೌಡ ಆತಂಕಕ್ಕೆ ಒಳಗಾಗಿದ್ದಾರೆ.
ಹೌದು ಸಾಲ ಸುಲಾ ಮಾಡಿ ಕೋಳಿ ಫಾರಂ ನಿರ್ಮಿಸಿದ ಚಂದ್ರೇಗೌಡ, ಮತ್ತೆ ಸಾಲ ಮಾಡಿ 5000 ಕೋಳಿ ಮರಿಗಳನ್ನು ತಂದು ಸಾಕಾಣಿಕೆ ನಡೆಸುತ್ತಿದ್ದರು. ಆದರೆ ಮಳೆಯಿಂದಾಗಿ ಸಾವಿರಾರು ಕೋಳಿ ಮರಿಗಳು ಸಾವನ್ನಪ್ಪಿವೆ.