ಸಂಗೀತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಜಾಸ್ತಿ ಆ್ಯಕ್ಟೀವ್ ಆಗಿದ್ದು, ತಮ್ಮ ಪ್ರತಿ ಅಪ್ಡೇಟ್ಗಳನ್ನೂ ಸೋಷಿಯಲ್ ಮೀಡಿಯಾದಲ್ಲಿರೋ ಹಂಚಿಕೊಳ್ತಾನೇ ಇರ್ತಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯ ಸುದರ್ಶನ್ ರಂಗಪ್ರಸಾದ್ ಅವರು ರಿಯಲ್ ಹೆಂಡತಿ ಸಂಗೀತಾ ಭಟ್ ಅವರ ಫೋಟೋಶೂಟ್ ಮತ್ತೆ ವೈರಲ್ ಆಗಿದೆ. ದೀಪಾವಳಿಗೆ ಸ್ಪೆಷಲ್ ಫೋಟೋಶೂಟ್ ಮಾಡಿಸಿಕೊಂಡ ಬೆನ್ನಲ್ಲೇ ಮತ್ತೆ ಸೀರೆಯಲ್ಲಿ ಮಿಂಚಿದ್ದಾರೆ . ನಟಿಯ ಪೋಸ್ಗೆ ಸೂಪರ್ ಅಂತ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಸದಾ ಹಾಟ್ ಫೋಟೋಶೂಟ್ ಮಾಡಿಸಿಕೊಳ್ಳುವ ಸಂಗೀತಾ ಭಟ್ ದೀಪಾವಳಿಗೆ ಟ್ರೆಡಿಷನಲ್ ಆಗಿ ಮಿಂಚಿದ್ದರು . ಯಾವ ಪಾತ್ರಕ್ಕೆ ಯಾವ ರೀತಿ ಕಾಣುತ್ತೇನೆ ಅನ್ನೋದನ್ನ ತಿಳಿದುಕೊಳ್ಳಲು ಈ ರೀತಿಯ ಫೋಟೊ ಶೂಟ್ಗಳಲ್ಲಿ ಕಾಣಿಸಿಕೊಳ್ತೇನೆ ಎಂದು ಹೇಳಿಕೊಂಡಿದ್ದರು. ಸಂಗೀತಾ ಅವರು ಬ್ಬ್ಯಾಕ್ ಸೀರೆಯಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ. ಫ್ರೀ ಹೇರ್ಸ್ ಬಿಟ್ಟುಕೊಂಡು ಕ್ಯೂಟ್ ಆಗಿ ಪೋಸ್ ಕೊಟ್ಟಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಸಂಗೀತಾ ಅವರು ಈ ರೀತಿ ಪೋಸ್ ಕೊಟ್ಟಿರುವುದು ಮೊದಲೇನಲ್ಲ. ಹಲವು ಬಾರಿ ಸೀರೆಯಲ್ಲಿ ಪೋಟೋಶೂಟ್ ಮಾಡಿಸಿದ್ದೂ ಇದೆ. ಈ ಹಿಂದೆ ಸಂಗೀತಾ ಅವರು ಕಮಲದ ಹೂವು ಹಿಡಿದು ನಾಚಿನೀರಾಗಿದ್ದರು. ದೀಪ ಹಿಡಿದುಕೊಂಡು. ಸೀರೆಯುಟ್ಟು, ಮೂಗುತಿ ಧರಿಸಿ, ಬಾರ್ಡರ್ ಸೀರೆಯಲ್ಲಿ ಮಿಂಚಿದ್ದರು.
‘ಭಾಗ್ಯಲಕ್ಷ್ಮೀ’ ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಅವರು ಪತ್ನಿ ಸಂಗೀತಾ ಭಟ್ ಜೊತೆಗೆ ರೊಮ್ಯಾಂಟಿಕ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಸುದರ್ಶನ್ ರಂಗಪ್ರಸಾದ್ ಅವರು ಈಗ ಸಿನಿಮಾ ಕಡೆಯೂ ಮುಖ ಮಾಡಿದ್ದಾರೆ. ಇವರ ಹೊಸ ಸಿನಿಮಾದಲ್ಲಿ ಕಿಶೋರ್ , ಸಂಗೀತಾ ಭಟ್ ಅವರು ನಟಿಸಲಿದ್ದಾರಂತೆ. ಸಂಗೀತಾ ಭಟ್ ಈ ಹಿಂದೆ ಒಂದು ಫೋಟೋ ಶೂಟ್ ಮಾಡಿಸಿದ್ದರು. ಗ್ಲಾಮರಸ್ ಆಗಿಯೂ ಇತ್ತು. ಅತ್ಯಂತ ಬೋಲ್ಡ್ ಅನಿಸೋ ಮಟ್ಟಿಗೇನೂ ಇತ್ತು. ಇದರೊಟ್ಟಿಗೆ ಇಲ್ಲಿ ಬೀಡಿ ಸೇದೋ ಲುಕ್ ಕೂಡ ಇತ್ತು. ಕಾರಣ, ಫೋಟೊ ಶೂಟ್ನ ಕಾನ್ಸೆಪ್ಟ್ ಹಾಗಿತ್ತು.