ಬೆಂಗಳೂರು : ಬ್ರಾಂಡ್ ಬೆಂಗಳೂರು ಹೆಸರಲ್ಲಿ ಬಿಬಿಎಂಪಿ ತನ್ನ ಅಸ್ತಿ ಮಾಲೀಕರಿಗೆ ನೂತನ ತಂತ್ರಜ್ಞಾನದ ಇ ಖಾತ ನೀಡೋದಕ್ಕೆ ಮುಂದಾಗಿದೆ. ಅದ್ರೆ ಇ ಖಾತಾ ನೀಡಲು ಬಿಬಿಎಂಪಿಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಇಂಟರ್ನೆಟ್ ಸಮಸ್ಯೆ ಹಿನ್ನೆಲೆಯಲ್ಲಿ ಇ ಖಾತ ನೀಡೋದಕ್ಕೆ ಖಾಸಗಿ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ.. ಇ-ಖಾತಾ ವಿತರಿಸುವವರೆಗೆ ಭೌತಿಕ ಖಾತಾಗಳಿಗೆ ಮಾನ್ಯತೆ ಇರುತ್ತದೆ . ಎಂದಿರುವ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಖಾತಾ ಪಡೆಯಲು ಯಾವುದೇ ಗಡುವು ನಿಗದಿಪಡಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮುಂದಿನ 15-30 ದಿನಗಳಲ್ಲಿ ಎಲ್ಲ ಖಾಸಗಿ ಸೇವಾ ಕೇಂದ್ರಗಳಲ್ಲೂ ಅಂತಿಮ ಇ-ಖಾತಾ ಪಡೆಯಲು ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಎಸ್ ..ಬಿಬಿಎಂಪಿ ಈಗ ಬ್ರಾಂಡ್ ಬೆಂಗಳೂರು ಅಗತ್ತಿದಂತೆ ಹೊಸ ಹೊಸ ತಂತ್ರಜ್ಞಾನದ ಮೂಲಕ ಪಾಲಿಕೆಯ ಗುಣಮಟ್ಟ ಹೆಚ್ಚು ಮಾಡಲು ಬಿಬಿಎಂಪಿ ಹೊಸ ಪ್ರಯತ್ನ ಮಾಡ್ತಿದೆ. ಇದೆ ಸಾಲಿನಲ್ಲಿ ಈಗ ಬಿಬಿಎಂಪಿ ವ್ಯಾಪ್ತಿಯ ಅಸ್ತಿ ಮಾಲೀಕರಿಗೆ ನೂತನ ತಂತ್ರಜ್ಞಾನ ವ್ಯವಸ್ಥೆಯ ಖಾತ ನೀಡಲು ಪಾಲಿಕೆ ಮುಂದಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 21 ಲಕ್ಷ ಅಸ್ತಿಗಳು ಬಿಬಿಎಂಪಿಯಲ್ಲಿ ನೊಂದಣಿ ಅಗಿದೆ. ಈ ಅಸ್ತಿಗಳಿಗೆ ಇ ಖಾತ ನೀಡಲು ಪಾಲಿಕೆ ಹೊಸ ಯೋಜನೆ ರೂಪಿಸಿ. ಕಳೆದ ಒಂದು ತಿಂಗಳಿಂದ ಇ ಖಾತ ನೀಡುತ್ತ ಬಂದಿದೆ. ಅದ್ರೆ.. ಇ ಖಾತ ಪಡೆಯಲು ಲಕ್ಷಾಂತರ ಜನ ವಾರ್ಡಗಳ ಕಛೇರಿಗೆ ಹೋದಗ ಇಂಟರ್ನೆಟ್ ಕೊರತೆಯಿಂದ ಇ ಖಾತ ಪಡೆಯಲು ಸಾಧ್ಯವಾಗುತ್ತಿಲ್ಲ ಅನ್ನೋ ಅರೋಪ ಕೇಳಿ ಬರ್ತಿದ್ವು.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಇ ಖಾತವನ್ನು ಬೆಂಗಳೂರು ಓನ್ ನಲ್ಲು ಪಡೆಯೋದಕ್ಕೆ ಅನುಮತಿ ನೀಡಿತು. ಅದ್ರೆ ಅಲ್ಲು ಕೂಡ ಹಲವು ಸಮಸ್ಯೆಗಳು ಸಾರ್ವಜನಿಕರನ್ನು ಕಡುತ್ತಿತ್ತು. ಇದರಿಂದ ಬಿಬಿಎಂಪಿ ಗೆ ಹಾಗೂ ಸರ್ಕಾರಕ್ಕೆ ಮುಜುಗರ ಪಡುವಂತೆ ಅಗಿತ್ತು. ಇದನ್ನು ಸರಿಪಡಿಸಲು ಬಿಬಿಎಂಪಿ ಈಗ ಪಾಸ್ ಪೋರ್ಟ ರೀತಿಯಲ್ಲಿ ಇ ಖಾತ ನೀಡಲು ಖಾಸಗಿ ಸಂಸ್ಥೆಗಳ ಜೊತೆ ಒಡಂಬಡಿಕೆಗೆ ಮುಂದಾಗಿದೆ..
ಇನ್ನೂ… ಬೆಂಗಳೂರಿನಲ್ಲಿ ಸುಮಾರು ೨೧ ಲಕ್ಷ ಅಸ್ತಿಗಳಿಗೆ ಇ ಖಾತ ನೀಡಲು ವರ್ಷಗಟ್ಟಲೆ ಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲಾ ವಾರ್ಡಗಳಲ್ಲಿ ಪಾಸ್ ಪೋರ್ಟ ನೀಡುವ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡ . ಖಾಸಗಿ ಸಂಸ್ಥೆಗೆ ಇಂತ್ತಿಷ್ಟು ಹಣ ನಿಗದಿ ಮಾಡಿ ಇ ಖಾತ ನೀಡಲು ಪಾಲಿಕೆ ಚಿಂತನೆ ನಡೆಸಿದೆ ಅಂತ ಬಿಬಿಎಂಪಿ ಆಯುಕ್ತರು ತಿಳಿಸಿದ್ರು..