
ಭಾರತ ಹಾಗೂ ಪಾಕಿಸ್ತಾನ ನಡುವಿನ ತಂಡದಲ್ಲಿ ಯಾವುದು ಉತ್ತಮ ತಂಡ ಎಂಬುದಕ್ಕೆ ಮೋದಿ ಉತ್ತರ ನೀಡಿದ್ದಾರೆ. ಅಮರಿಕನ್ ಪೋಡ್ಕ್ಯಾಸ್ಟರ್ ಹಾಗೂ ಸಂಶೋಧಕ ವಿಜ್ಙಾನಿ ಲೆಕ್ಸ್ ಫ್ರೀಡಮ್ಯಾನ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕ್ರೀಡೆ ಜನರನ್ನು ಒಟ್ಟುಗೂಡಿಸುವ ಶಕ್ತಿಯನ್ನು ಹೊಂದಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕಿರುವ ಪ್ರಾಮುಖ್ಯತೆ ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಎರಡು ತಂಡಗಳು ಮುಖಾಮುಖಿಯಾದಾಗ ಅಭಿಮಾನಿಗಳು ಅತ್ಯಂತ ಕಾತರತೆಯಿಂದ ಕಾಯುತ್ತಿರುತ್ತಾರೆ. ಕ್ರೀಡಾಂಗಣದ ಆಸನಗಳೆಲ್ಲ ತುಂಬಿ ಹೋಗಿರುತ್ತವೆ. ಆಟಗಾರರಿಗೂ ಈ ಪಂದ್ಯದನ್ನು ಗೆಲ್ಲಬೇಕೆಂಬ ಒತ್ತಡದಲ್ಲಿರುತ್ತಾರೆ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೇ ಸಾಕ್ಷಿ. ಈ ಎರಡು ತಂಡಗಳ ನಡುವೆ ಯಾವುದು ಉತ್ತಮರು ಯಾರು ಅಲ್ಲ ಎಂಬ ಪ್ರಶ್ನೆಗೆ ಬಂದಾಗ ನಾನು ಆಟದಲ್ಲಿ ದೊಡ್ಡ ಪರಿಣತ ಅಲ್ಲ. ಇದರಲ್ಲಿ ಪರಿಣಿತಿ ಉಳ್ಳವರು ಇದಕ್ಕೆ ಉತ್ತರ ಕೊಡಬಹುದು. ಆದರೆ ಕೆಲವೊಮ್ಮೆ ಫಲಿತಾಂಶಗಳು ತಾವಾಗಿಯೇ ಮಾತನಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಮೆಸ್ಸಿ ಉತ್ತಮ ಪುಟ್ಬಾಲ್ ಆಟಗಾರ
ಇದೇ ವೇಳೆ ಸಂದರ್ಶನದಲ್ಲಿ ಅತ್ಯುತ್ತಮ ಪುಟ್ಬಾಲ್ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಿ ಮೋದಿ 1980ರ ದಶಕದಲ್ಲಿ ಜನರು ಡಿಯಾಗೋ ಮರಡೋನಾ ಅವರನ್ನು ತಿಳಿದಿದ್ದರು. ಈಗ ಎಲ್ಲರಿಗೂ ಲಿಯೋನಲ್ ಮೆಸ್ಸಿ ತಿಳಿದಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

ಅಭಿಷೇಕ್.ಎಸ್