ಹೌದು..ಥೈಲ್ಯಾಂಡ್ ಹಾಗೂ ಮಯನ್ಮಾರ್ʼನಲ್ಲಿ ಇಂದು ಸಂಭವಿಸಿರುವ 7.7 ಹಾಗೂ 6.6 ತೀವ್ರತೆಯ ಭೀಕರ ಭೂಕಂಪ ಇಂಥಾದ್ದೊಂದು ಪ್ರಶ್ನೆ ಹುಟ್ಟುಹಾಕಿದೆ. ವಿಪರೀತ ಒತ್ತಡ ತಾಳದೇ, ಬಹುದೊಡ್ಡ ಮಾರಣಹೋಮಕ್ಕೆ ಈ ಧರಣಿ ಸಿದ್ದವಾಗುತ್ತಿದೆಯಾ ಎನ್ನುವ ಅನುಮಾನಗಳು ಮೂಡುತ್ತಿರುವುದು ಸುಳ್ಳಲ್ಲ. ಕಳೆದೊಂದು ಶತಮನಾದಲ್ಲಿ ಭೂಮಿಯ ಮೇಲಿನ ಭೂಕಂಪಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇವಲ ಭೂಮಿಯ ಮೇಲ್ಭಾಗದಲ್ಲಿ ಮಾತ್ರವಲ್ಲ, ಸಾಗರದ ಒಡಲಾಳದಲ್ಲೂ ಭಯಾನಕ ಭೂಕಂಪಗಳು ಸೃಷ್ಟಿಯಾಗುತ್ತಿವೆ. ಇದರಿಂದ ಕೆಲವೊಮ್ಮೆ ಭೀಭತ್ಸ ಸುನಾಮಿಯಂತಹ ಘಟನೆಗಳೂ ಸಂಭವಿಸುತ್ತಿವೆ. ಈ ಎಲ್ಲಾ ದುರ್ಘಟನೆಗಳಿಂದ ನೂರಾರು, ಸಾವಿರಾರು ಜನ ತಮ್ಮ ಪ್ರಾಣಗಳನ್ನ ಕಳೆದುಕೊಳ್ತಿದ್ದಾರೆ. ಹಾಗಾದ್ರೆ, ಮಾನವನ ದುರಾಚಾರಕ್ಕೆ ರೋಸಿಹೋದ ಪೃಕೃತಿ ಮಾತೆ, ಮನುಷ್ಯನ ಮೇಲೆ ಮುನಿದಿದ್ದಾಳಾ.!?
2004ರಲ್ಲಿ ಇಂಡೋನೇಷ್ಯಾದ ಸುಮಾತ್ರಾ ಬಳಿ, ಸಮುದ್ರದಾಳದಲ್ಲಿ 9.2 ತೀವ್ರತೆಯ ಭಯಾನಕ ಭೂಕಂಪ ಸಂಭವಿಸಿತ್ತು. ಇದರ ಪರಿಣಾಮ ಉಂಟಾದ ಶತಮಾನದಲ್ಲೇ ಅತಿ ಬಯಾನಕ ಸುನಾಮಿಯಿಂದ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಲಕ್ಷಾಂತರ ಜನರು ಬಲಿಯಾಗಿದ್ದರು. ಅವತ್ತಿನವರೆಗೂ ಸುನಾಮಿ ಅಂದರೆ ಏನು ಅಂದರೇ ಗೊತ್ತಿಲ್ಲದ ಜಗತ್ತಿಗೆ, ಈ ʼಸುನಾಮಿʼ ಅನ್ನೋದು ತನ್ನ ರುದ್ರ ನರ್ತನವನ್ನು ಜಗತ್ತಿಗೆ ಪರಿಚಯಿಸಿತ್ತು. ಆನಂತರ 2011ರಲ್ಲಿ ಜಪಾನ್ ಸಮುದ್ರದಾಳದಲ್ಲಿ ಉಂಟಾದ ಭೀಕಂಪವೂ ಸುನಾಮಿಗೆ ಕಾರಣವಾಗಿ, ಸಾವಿರಾರು ಜನರ ಸಾವಿಗೆ ಕಾರಣವಾಗಿತ್ತು.!

ಜಗತ್ತಿನಲ್ಲಿ ಸಾಮಾನ್ಯವಾಗಿ ʼರಿಂಗ್ ಆಫ್ ಫೈರ್ʼ ಎನ್ನುವ, ಅತಿ ಹೆಚ್ಚು ಭೂಕಂಪಕ್ಕೆ ತುತ್ತಾಗಬಲ್ಲ ಪ್ರದೇಶಗಳ ಒಂದು ವ್ಯೂಹವೇ ಇದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಈಗ ವಿಜ್ನಾನಿಗಳಿಗೆ ಸವಾಲಾಗಿರೋ ಅಂಶವೆಂದರೆ, ಇವತ್ತಿನವರೆಗೂ ಒಮ್ಮಯೂ ಭೂಕಂಪ ಸಂಭವಿಸದ ಜಾಗಗಳಲ್ಲಿಯೂ, ಈಗ ಭೂಕಂಪಗಳು ಸಂಭವಿಸುತ್ತಿವೆ. ಉದಾ: ಬಂಗಾಳಕೊಲ್ಲಿಯ ಕೆಲವು ಜಾಗ. ಇದು ಈಗ ವಿಜ್ನಾನಿಗಳಿಗೂ ಸವಾಲೆಸೆಯುತ್ತಿದೆ. ಸಾಮಾನ್ಯವಾಗಿ ಭೂಪದರದೊಳಗಿನ ಟೆಕ್ಟಾನಿಕ್ ಪ್ಲೇಟ್ʼಗಳ ಘರ್ಷಣೆಯಿಂದಲೇ ಭೀಕಂಪಗಳು ಸಂಭವಿಸುತ್ತವೆ. ಭೂಮಿಯ ಯಾವ ಭಾಗದಲ್ಲಿ ಟೆಕ್ಟಾನಿಕ್ ಪ್ಲೇಟ್ʼಗಳ ಚಲನೆ ಅಧಿಕವಾಗಿರುತ್ತದೋ, ಆ ಭಾಗದಲ್ಲಿ ಭೂಕಂಪಗಳ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಉದಾ: ಜಪಾನ್! ಜಪಾನ್ 5 ಟೆಕ್ಟಾನಿಕ್ ಪ್ಲೇಟ್ʼಗಳ ಮೇಲೆ ಕುಳಿತಿರುವುದರಿಂದಲೇ, ಅಲ್ಲಿ ಭೂಕಂಪ ಅನ್ನೋದು ಸಾಮಾನ್ಯ ವಿಷಯ. ಆದರೆ ಈ ಟೆಕ್ಟಾನಿಕ್ ಪ್ಲೇಟ್ʼಗಳ ಚಲನೆ ಹೆಚ್ಚಾಗಿಲ್ಲದ ಸ್ಥಳಗಳಲ್ಲಿಯೂ ಈಗ ಭೂಕಂಪಗಳು ಸಂಭವಿಸುತ್ತಿರುವುದು, ವಿಜ್ಞಾನಿಗಳು ತಲೆ ಕೆರೆದುಕೊಳ್ಳುವಂತೆ ಮಾಡುತ್ತಿದೆ. ಇಂತಹುದೇ ಹೊಸ ಹೊಸ ಪ್ರದೇಶಗಳು ಸೃಷ್ಟಿಯಾಗುತ್ತಿದೆ!
ಈ ಬಯಾನಕ ಭೂಕಂಪದ ಆತಂಕ ನಮ್ಮ ಹಿಮಾಲಯ ಪರ್ವತ ಶ್ರೇಣಿಯನ್ನೂ ಬಿಟ್ಟಿಲ್ಲ. ವಿಜ್ನಾನಿಗಳ ಪ್ರಕಾರ ಹಿಮಾಲಯದ ತಪ್ಪಲಲ್ಲಿ ಶತಮಾನಗಳಿಂದ ಯಾವುದೇ ಬಹುದೊಡ್ಡ ಭೂಕಂಪ ಸಂಭವಿಸಿಲ್. ಹಾಗಾಗಿ ಹಿಮಾಲಯದ ಒಡಲಲ್ಲಿ ಅತಿಯಾದ ಒತ್ತಡ ಸೃಷ್ಟಿಯಾಗಿದೆ. ಈ ಒತ್ತಡ ಯಾವ ಸಮಯದಲ್ಲಿ ಬೇಕಾದರೂ ಜ್ವಾಲಾಮುಖಿಯಂತೆ ಹೊರಗೆ ಚಿಮ್ಮಬಹುದು. ಹಾಗಾಗಿ ಹಿಮಾಲಯ ಪರ್ವತ ಶ್ರೇಣಿ ಪ್ರದೇಶದಲ್ಲಿ, 8 ಅಥವಾ 9 ತೀವ್ರತೆಯ ಭೂಕಂಪ ಯಾವುದೇ ಸಮಯದಲ್ಲಿ ಸಂಭವಿಸಬಹುದಂತೆ.! ಹೀಗಂತ ವಿಜ್ನಾನಿಗಳು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಒಂದು ವೇಳೆ ವಿಜ್ನಾನಿಗಳು ಹೇಳಿದಂತೆ, ಹಿಮಾಲಯದಲ್ಲಿ ಭಯಾನಕ ಭೂಕಂಪ ಸಂಭವಿಸಿದ್ದೇ ಹೌದಾದಲ್ಲಿ ಆಗುವ ಹಾನಿಯನ್ನು ಊಹಿಸಲೂ ಅಸಾಧ್ಯ.! ಕೋಟ್ಯಂತರ ಜನ ಹಿಮಲಾಯದ ತಪ್ಪಲಲ್ಲಿ ಕೋಟ್ಯಾಂತರ ಜನ ತಮ್ಮ ನೆಲೆ ಕಂಡುಕೊಂಡಿದ್ದಾರೆ. ಒಂದು ವೇಳೆ ಈ ದುರಂತ ಸಂಭವಿಸಿದ್ದೇ ಹೌದಾದಲ್ಲಿಆಗುವ ಜೀವ ಹಾನಿ ನಮ್ಮ ಅಂದಾಜಿಗೂ ನಿಲುಕದ್ದು..!