
keep these vastu things in your home and get luck
ಮನೆಯನ್ನ ಅಲಂಕರಿಸುವಾಗ ವಿವಿಧ ರೀತಿಯ ವಸ್ತುಗಳನ್ನ ಬಳಸಿಕೊಂಡು ಅಲಂಕರಿಸ್ತಿವಿ. ನಮ್ಮಿಷ್ಟದ ವಿಗ್ರಹಗಳನ್ನ ಶೋಪೀಸ್ಗಳನ್ನ ಖರೀದಿ ಮಾಡ್ತಿವಿ. ಆದರೆ ವಾಸ್ತು ಪ್ರಕಾರ ನೋಡೋದಾದ್ರೆ ಕೆಲವೊಂದು ವಿಗ್ರಹಗಳನ್ನ ಮನೆಲಿ ಇರಿಸೋದಕ್ಕೆ ತನ್ನದೆ ಆದ ರೀತಿ, ನೀತಿಗಳಿವೆ. ಇದರಿಂದ ಮನೆಗೂ ಅದೃಷ್ಟ ಬರುತ್ತೆ. ಹಾಗಾದ್ರೆ ನಿಮ್ಮ ಮನೆಯಲ್ಲಿ ಯಾವ ಯಾವ ವಿಗ್ರಹಳನ್ನ ಇರಿಸೋದು ಸೂಕ್ತ ಅನ್ನೋದನ್ನ ತಿಳಿಸಿಕೊಡ್ತಿವಿ. . .
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಅಲಂಕಾರಕ್ಕಾಗಿ ಕೆಲವು ವಿಗ್ರಹಗಳನ್ನು ಇಡುತ್ತಾರೆ. ಈ ಪ್ರತಿಮೆಗಳು ಲೋಹವಾಗಿರಬಹುದು, ಗಾಜಿನದ್ದಾಗಿರಬಹುದು ಅಥವಾ ಇನ್ನಾವುದೇ ವಸ್ತುವಿನದ್ದಾಗಿರಬಹುದು. ವಾಸ್ತುವಿನಲ್ಲಿ ವಿಗ್ರಹಗಳನ್ನು ಇಡುವುದಕ್ಕೆ ಬಹಳ ವಿಶೇಷವಾದ ಮಹತ್ವವಿದೆ.
ಹಾಗಾಗಿ ಜೀವನದ ಮೇಲೆ ಶುಭ ಪರಿಣಾಮವನ್ನು ಬೀರುವ 7 ಮೂರ್ತಿಗಳನ್ನು ಮನೆಯಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಶಾಂತಿ ಉಳಿಯುತ್ತದೆ.
ನೀವೂ ಆನೆಯ ವಿಗ್ರಹ ಇಡುವದರಿಂದ ಸಂಪತ್ತು ಹೆಚ್ಚಾಗಲಿದೆ, ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ. ಆನೆಯು ಸಂತೋಷ ಮತ್ತು ಸಮೃದ್ಧಿಯ ಜೀವಿ. ನೀವು ಅದನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿದರೆ ಅದು ಅತ್ಯಂತ ಮಂಗಳಕರ. ಬೆಳ್ಳಿಯ ಆನೆಯ ವಿಗ್ರಹವನ್ನು ಮಲಗುವ ಕೋಣೆಯಲ್ಲಿ ಇಡೋದ್ರಿಂದ ನಿಮ್ಮ ಮೇಲೆ ರಾಹುವಿನ ದುಷ್ಪರಿಣಾಮಗಳು ಕೊನೆಗೊಳ್ಳುತ್ತೆ.
ಇನ್ನು ಹಂಸ ಪ್ರೀತಿ, ಶಾಂತಿ ಮತ್ತು ಸಾಮರಸ್ಯದ ಸಂಕೇತ. ನಿಮ್ಮ ಲಿವಿಂಗ್ ರೂಂನಲ್ಲಿ ಜೋಡಿ ಹಂಸಗಳ ಪ್ರತಿಮೆಯನ್ನು ಹಾಕಬಹುದು. ಇದರಿಂದ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ ಮತ್ತು ಮನೆಯಲ್ಲಿ ಪ್ರೀತಿ ಮತ್ತು ಸಾಮರಸ್ಯದ ವಾತಾವರಣ ಇರುತ್ತದೆ. ಮನೆಯಲ್ಲಿ ಒಂದು ಜೋಡಿ ಹಂಸಗಳ ವಿಗ್ರಹವನ್ನು ಇರಿಸುವ ಮೂಲಕ ಪತಿ ಮತ್ತು ಹೆಂಡತಿಯ ನಡುವಿನ ಸಂಬಂಧವು ತುಂಬಾ ಸೌಹಾರ್ದಯುತವಾಗಿರುತ್ತೆ ಅಂತ ಶಾಸ್ತ್ರ ಹೇಳುತ್ತೆ.
ಮನೆಯಲ್ಲಿ ಆಮೆ ವಿಗ್ರಹ ಇರುವುದು ತುಂಬಾ ಶುಭ ಸಂಕೇತ. ಕೆಲವರು ತಮ್ಮ ಅಕ್ವೇರಿಯಂಗಳಲ್ಲಿ ಆಮೆಗಳನ್ನು ಸಾಕುತ್ತಾರೆ. ಆಮೆ ವಿಷ್ಣುವಿನ ರೂಪ. ಶಾಂತಿಯುತ, ದೀರ್ಘಕಾಲ ಬದುಕುವ ಜೀವಿ. ಆದ್ದರಿಂದ ಜನರು ಆಮೆಯನ್ನು ತಮ್ಮ ಮನೆಯಲ್ಲಿ ಇಡಲು ಇಷ್ಟಪಡುತ್ತಾರೆ.
ನೀವು ಜೀವಂತ ಆಮೆಯನ್ನು ಇಡಲು ಸಾಧ್ಯವಾದಿದ್ರೆ, ನೀವು ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಆಮೆಯ ಪ್ರತಿಮೆ ಇಡಬಹುದು. ಇದು ಕೂಡ ಅಷ್ಟೇ ಮಂಗಳಕರ. ನಿಮ್ಮ ಹಣವನ್ನು ಇಡುವ ಜಾಗದಲ್ಲಿ ಸಣ್ಣ ಬೆಳ್ಳಿ ಆಮೆಯನ್ನು ಸಹ ಇರಿಸಿಕೊಳ್ಳುವುದು ಕೂಡಾ ಒಳ್ಳೆಯದೆ.
ವಾಸ್ತುವಿನಲ್ಲಿ, ಗಿಳಿಯನ್ನು ಪ್ರೀತಿ ಮತ್ತು ಸಂತೋಷದ ಸಂಕೇತ. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಮಕ್ಕಳ ಕೋಣೆಯಲ್ಲಿ ಗಿಳಿಯ ಪ್ರತಿಮೆ ಅಥವಾ ಚಿತ್ರವನ್ನು ಹಾಕಿದರೆ, ಅವರ ಏಕಾಗ್ರತೆ ಹೆಚ್ಚುತ್ತದೆ. ಗಿಳಿ ಭೂಮಿ, ಬೆಂಕಿ, ನೀರು, ಮರ ಮತ್ತು ಲೋಹವನ್ನು ಸಂಕೇತಿಸುತ್ತದೆ. ಹಾಗಾಗಿ ಮನೆಯಲ್ಲಿ ಗಿಣಿಯನ್ನು ಇಡುವುದರಿಂದ ಅಥವಾ ಗಿಣಿ ಮೂರ್ತಿಯನ್ನು ಇಡುವುದರಿಂದ ಸಂಪತ್ತು ಮತ್ತು ವೈಭವವು ಹೆಚ್ಚಾಗುತ್ತದೆ.
ಇನ್ನು ಮನೆಯಲ್ಲಿ ಅಕ್ವೇರಿಯಂ ಹೊಂದಲು ಇಷ್ಟಪಡುತ್ತಾರೆ. ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮೀನುಗಳನ್ನು ಇರಿಸಿ. ಮೀನುಗಳು ಬಹಳ ಮಂಗಳಕರ ಸಂಕೇತ. ನೀವು ಮನೆಯಲ್ಲಿ ಅಕ್ವೇರಿಯಂ ಹೊಂದಲು ಸಾಧ್ಯವಾಗದಿದ್ದರೆ, ನೀವು ಮನೆಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಮೀನುಗಳನ್ನು ಸಹ ಇಡಬಹುದು. ಅದರ ಪರಿಣಾಮವೂ ಅಷ್ಟೇ ಒಳ್ಳೆಯದು.
ನಿಮ್ಮ ಮನೆಯಲ್ಲಿ ಹಸುವಿನ ಪ್ರತಿಮೆಯನ್ನು ಇರಿಸಿ. ಈ ಪ್ರತಿಮೆ ಹಿತ್ತಾಳೆಯದ್ದಾಗಿರಲಿ, ಬಿಳಿ ಕಲ್ಲಿನದ್ದಾಗಿರಲಿ, ಇದನ್ನು ಅತ್ಯಂತ ಮಂಗಳಕರ. ಮನೆಯಲ್ಲಿ ಗೋವಿನ ವಿಗ್ರಹವನ್ನು ಇಡುವುದರಿಂದ ಮಕ್ಕಳ ಆರೋಗ್ಯವು ಉತ್ತಮವಾಗಿರುತ್ತದೆ. ಒಂಟೆಯ ಪ್ರತಿಮೆಯನ್ನು ಲಿವಿಂಗ್ ರೂಮಿನ ವಾಯುವ್ಯ ದಿಕ್ಕಿನಲ್ಲಿ ಇಟ್ಟರೆ ಉತ್ತಮ. ಇದರಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನ ಪಡೆಯುತ್ತೀರಿ.