
B. Saroja Devi
Ashwaveega News 24×7 ಜು. 25: ಇತ್ತೀಚೆಗಷ್ಟೆ ನಿಧನರಾದ ಅಭಿನಯ ಸರಸ್ವತಿ ಬಿ ಸರೋಜಾ ದೇವಿ ಅವರ 11ನೇ ದಿನ ವೈಕುಂಠ ಸಮಾರಾಧನೆ ಕಾರ್ಯಕ್ರಮ ಇಂದು (ಜುಲೈ 25) ಬೆಂಗಳೂರಿನಲ್ಲಿ ನಡೆಯಿತು. ಚಿತ್ರರಂಗ ಹಾಗೂ ರಾಜಕೀಯ ರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಮಾಜಿ ಸಚಿವ, ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು, ಮಲ್ಲೇಶ್ವರದ 11ನೇ ರಸ್ತೆಗೆ ಬಿ ಸರೋಜಾ ದೇವಿ ಅವರ ಹೆಸರು ಇಡುತ್ತೇವೆ’ ಎಂದು ಘೋಷಿಸಿದರು.
ಪಂಚಭಾಷಾ ತಾರೆ ಬಿ ಸರೋಜಾದೇವಿಯವರು 87ನೇ ವರ್ಷಕ್ಕೆ ಕಣ್ಮುಚ್ಚಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಸಾಧಾರಣ ನಟಿ ಇವರು. ಇವರ ಪಾರ್ಥೀವಕ್ಕೆ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮ ಚನ್ನಪಟ್ಟಣದ ದಶವಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.
ಇನ್ನು ಇತ್ತಿಚೇಗೆ ನಟಿ ತಾರಾ ಅನುರಾಧ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮನವಿಯೊಂದನ್ನು ನೀಡಿದ್ದಾರೆ. ಈಚೆಗೆ ‘ಅಭಿನಯ ಸರಸ್ವತಿ’ ಬಿ. ಸರೋಜಾ ದೇವಿ ಅವರು ನಿಧನರಾದರು.
ಹಾಗಾಗಿ, ಸಿನಿಮಾದರಿಗೆ ರಾಜ್ಯ ಸರ್ಕಾರ ನೀಡುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂದಕ್ಕೆ ಬಿ. ಸರೋಜಾ ದೇವಿ ಅವರ ಹೆಸರು ಇಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ತಾರಾ ಮನವಿ ಪತ್ರ ನೀಡಿದ್ದಾರೆ.