
Remona Evette Pereira is rewriting history with her 170-hour
Ashwaveega News 24×7 ಜು. 29: ಸಂತ ಅಲೋಶಿಯಸ್ ಕಾಲೇಜಿನಲ್ಲಿ ತೃತೀಯ ಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ರೆಮೋನಾ ಎವೆಟ್ಟೆ ಪಿರೇರಾ ಜು.21ರಿಂದ 28 ವರೆಗೆ 7 ದಿನಗಳ ಕಾಲ 170 ಗಂಟೆ ಭರತನಾಟ್ಯ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.
ಈ ಹಿಂದೆ 2023 ರಲ್ಲಿ ಸೃಷ್ಟಿ ಸುಧೀರ್ ಜಗತಪ್ನ ಹೆಸರಿನಲ್ಲಿರುವ 127 ಗಂಟೆಗಳ ಕಾಲದ ಭರತನಾಟ್ಯ ರೆಕಾರ್ಡ್ ಮುರಿದು ತನ್ನದೇ ಹೊಸ ದಾಖಲೆ ಮಾಡಲು ಶ್ರಮ ಪಟ್ಟು ಯಶಸ್ವಿಯಾಗಿದ್ದಾರೆ. ಮೂರು ಗಂಟೆಗೊಮ್ಮೆ 15 ನಿಮಿಷಗಳಷ್ಟು ಮಾತ್ರ ವಿಶ್ರಾಂತಿ ಪಡೆದು ಉಳಿದ ಸಮಯದಲ್ಲಿ ಬಿಡುವಿಲ್ಲದೆ ಹಗಲು ಇರುಳು ಎನ್ನದೇ ತನ್ನ ಸಾಧನೆ ಮೆರೆದು ವಿಜಯಿಯಾಗಿದ್ದಾರೆ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳ ಸಮ್ಮುಖದಲ್ಲಿಯೇ ರೆಮೋನಾ ಭರತನಾಟ್ಯ ಪ್ರದರ್ಶಿಸಿದ್ದಾರೆ. ಏಳು ದಿನಗಳ ಪ್ರದರ್ಶನ ಕ್ಯಾಮರಾದ ಮೂಲಕ ರೆಕಾರ್ಡ್ ಮಾಡಲಾಗಿದೆ. ಅಧಿಕಾರಿಗಳು ರೆಮೋನಾ ಸಾನೆಯನ್ನು ಸಂಪೂರ್ಣವಾಗಿ ದಾಖಲೀಕರಣ ಮಾಡಿಕೊಂಡಿದ್ದಾರೆ. ರೆಮೋನಾ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು, ಸಹಪಾಠಿಗಳಿಂದಲೂ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಇದೀಗ, ರೆಮೋನಾ ಸಾಧನೆಗೆ ಸಹಪಾಠಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಗಂಟೆಗಟ್ಟಲೆ ನಿದ್ದೆ ಇಲ್ಲದೆ ಸಾಧನೆಯತ್ತ ಹೆಜ್ಜೆ ಹಾಕುತ್ತಿರುವ ರೆಮೋನಾ ಒಂದೆಡೆಯಾದರೇ ಆಕೆಯ ತಾಯಿ ಗ್ಲಾಡಿಸ್ ಪಿರೇರಾ ಮಗಳಿಗೆ ಸಾಥ್ ನೀಡುವ ಕೆಲಸದಲ್ಲಿ ಯಾವುದೇ ಬಿಡುವಿಲ್ಲದೆ ನಿರತರಾಗಿದ್ದಾರೆ. ತಾಯಿಯಂತೆ ಆಕೆಯ ಅಣ್ಣ ರೊನಾಲ್ಡ್ ರಾಕ್ಸನ್ ಸಹ ಆಕೆಯ ಸಾಧನೆಗೆ ಅಕ್ಕರೆಯಿಂದ ಸಹಾಯ ಮಾಡಿದ್ದಾರೆ.
ರೆಮೋನಾ ಭರತನಾಟ್ಯ ಮಾತ್ರವಲ್ಲದೇ ಕ್ಲಾಸಿಕಲ್, ಸೆಮಿಕ್ಲಾಸಿಕಲ್, ಫೋಕ್, ಹಿಪ್-ಹಾಪ್, ಲ್ಯಾಟಿನ್, ಆಕ್ರೋಬ್ಯಾಟಿಕ್ಸ್, ಬಾಲಿವುಡ್, ಬಾಲ ರೂಮ ಮುಂತಾದ ಪ್ರಕಾರದ ನೃತ್ಯ ಮಾಡುತ್ತಾರೆ.
ಮುರಿದ ಗ್ಲಾನ್ ಮತ್ತು ಸೂಜಿಯ ಮೇಲೆ ನೃತ್ಯ, ತಟ್ಟೆ ಮೇಲೆ ನಿಂತು, ಮಡಕೆ ಮೇಲೆ ನಿಂತು ನೃತ್ಯ ಮಾಡುತ್ತಾರೆ. ಈಕೆಯ ಸಾಧನೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲೂ ಗುರುತಿಸುವಂತಾಗಿದೆ.