
Ashwaveega News 24×7 ಅ. 04: ನಾಳೆ ಸಾರಿಗೆ ಮುಷ್ಕರವನ್ನು ಯಾವುದೇ ಕಾರಣಕ್ಕೂ ಮುಂದೂಡಿಕೆ ಮಾಡೋಕೆ ಆಗಲ್ಲ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆದಿದೆ. 38 ತಿಂಗಳ ವೇತನದ ಬಗ್ಗೆ ಚರ್ಚೆ ಆಗಿದೆ. ಈ ಹಿಂದಿನ ಸಭೆಯಲ್ಲಿ ನಾವು ಅರಿಯರ್ಸ್ ಕೊಡಬೇಕು ಎಂದು ಇಲ್ಲ ಎಂದಿದ್ದರು. 4 ವರ್ಷ ಕಾಯುವಂತೆ ಹೇಳಿದ್ದರು.
ಶ್ರೀನಿವಾಸ ಮೂರ್ತಿ ಸಮಿತಿ 14 ತಿಂಗಳ ಅರಿಯರ್ಸ್ ಕೊಡಲು ಹೇಳಿದೆ. ಅದು 700 ಕೋಟಿ ರೂಪಾಯಿ ಆಗಬಹುದು. ಅದನ್ನು ನಾವು ಕೊಡುತ್ತೇವೆ. ಈಗ ಮುಷ್ಕರವನ್ನು ವಾಪಸ್ ತಗೊಳ್ಳಿ ಅಂತ ಸಿಎಂ ಎಂದಿದ್ದಾರೆ ಎಂದು ಅನಂತ್ ಸುಬ್ಬರಾವ್ ಹೇಳಿದ್ದಾರೆ.
1- 1- 2024ರ ವೇತನ ಹೆಚ್ಚಳ ಏನಿದೆಯೋ ಅದನ್ನು ನಂತರ ಮಾತನಾಡೋಣ ಎಂದರು. ಇದಕ್ಕೆ ನಾವು ಒಪ್ಪಲಿಲ್ಲ. ಈಗ 700 ಕೋಟಿ ಹಣ ಕೊಡುತ್ತೀರಾ, ಇನ್ನು 24 ತಿಂಗಳ ಬಾಕಿ ಹಣ ಕೊಡಬೇಕು. ಅದು ಸಾವಿರ ಕೋಟಿ ಹಣ ಆಗಬಹುದು.
ಇದನ್ನ ಇನ್ಸ್ಟಾಲ್ಮೆಂಟ್ನಲ್ಲಿ ಕೊಡಿ ಎಂದು ಹೇಳಿದ್ದೇವು. ಇದಕ್ಕೆ ಸರ್ಕಾರ ಒಪ್ಪಲಿಲ್ಲ. ಸಷೆನ್ಸ್ ಆದ ಮೇಲೆ ಮಾತನಾಡೋಣ ಎಂದು ನಮ್ಮನ್ನ ಸಮಧಾನ ಮಾಡಲು ಬಂದ್ರು. ಈ ಹಿಂದೆ ಎರಡು ಬಾರಿ ಮುಷ್ಕರ ಮುಂದಕ್ಕೆ ಹಾಕಿದ್ದೇವು. ಹಾಗಾಗಿ ಇಂದು ಸಂಧಾನ ಸಭೆ ಇಂದು ವಿಫಲ ಆಯಿತು. ನಾಳೆ ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಾಂತ ಮುಷ್ಕರ ಇರುತ್ತದೆ ಎಂದು ಹೇಳಿದ್ದಾರೆ.