
Ashwaveega News 24×7 ಅ. 15: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ನಿಮಿತ್ತ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ಏನು ದೇಶವನ್ನು ಉದ್ದೇಶಿಸಿ ಪ್ರಧಾನಿಗಳು ಭಾಷಣ ಮಾಡಲಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಬೆಳಗ್ಗೆ ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಅವರ ಸಮಾಧಿಗೆ ಭೇಟಿ ನೀಡಿದ್ದರು. ಬಳಿಕ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಕೆ ಮಾಡಿದರು. ಇದಾದ ಮೇಲೆ ಕೆಂಪು ಕೋಟೆ ಕಡೆಗೆ ಆಗಮಿಸಿದರು. ಈ ವೇಳೆ ರಕ್ಷಣಾ ಸಚಿವರು ಪ್ರಧಾನಿಗಳನ್ನು ಸ್ವಾಗತ ಮಾಡಿದರು.
ಎಲ್ಲರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿದರು. ಪ್ರಧಾನಿ ಮೋದಿ ಅವರು ಒಟ್ಟು 12 ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ.
ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನ ಸ್ಥಳದಿಂದಲೇ 5 ಸಾವಿರ ಜನರು ಕಣ್ತುಂಬಿಕೊಂಡರು. ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲದೇ ಯಾವುದೇ ಡ್ರೋನ್ ಹಾರಿಸಲು ಅವಕಾಶ ನೀಡಿಲ್ಲ.